ತಂದೆ- ಮಗ ಸಜೀವ ದಹನ: ಬಹ್ರೀಚ್ ಉದ್ವಿಗ್ನ
Update: 2016-01-23 08:47 IST
ಲಖನೌ: ಉತ್ತರ ಪ್ರದೇಶದ ಬಹ್ರೀಚ್ ಜಿಲ್ಲೆಯ ಉಮಾರಿಯಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ತಂದೆ ಹಾಗೂ ಮಗನನ್ನು ಜೀವಂತವಾಗಿ ದಹಿಸಿದ ಘಟನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ.
ಅನ್ವರ್ (30) ಹಾಗೂ ಆತನ ಮಗ ಖಲೀಂ (8) ಎಂಬ ಇಬ್ಬರು ತೀವ್ರ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧೀಕಕ್ಷಕ ಶಾಲೀಕ್ ರಾಮ್ ವರ್ಮಾ ಪ್ರಕಟಿಸಿದ್ದಾರೆ,
ಇಬ್ಬರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಇದರ ಜತೆಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.