×
Ad

ರೋಹಿತ್ ವೇಮುಲ ಆತ್ಮಹತ್ಯೆ ಬಗ್ಗೆ ಮೋದಿ 5 ದಿನಗಳ ಬಳಿಕ ಹೇಳಿಕೆ ಕುರಿತು ದಿ ಟೆಲಿಗ್ರಾಫ್ ಪತ್ರಿಕೆಯ ವರದಿ

Update: 2016-01-23 16:59 IST

ರೋಹಿತ್ ವೇಮುಲ ಆತ್ಮಹತ್ಯೆ ಬಗ್ಗೆ ಮೋದಿ 5 ದಿನಗಳ ಬಳಿಕ ಹೇಳಿಕೆ ಕುರಿತು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದ್ದು ಹೀಗೆ .

ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ  ರೋಹಿತ್ ವೇಮುಲ ತನಗಾದ ಅನ್ಯಾಯವನ್ನು ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ  ತುಟಿ ಪಿಟಿಕ್ ಎನ್ನದೆ ಸುಮ್ಮನಿದ್ದರು. ಈಗ ೫ ದಿನಗಳ ಬಳಿಕ " ಆ ತಾಯಿಯ ನೋವು ನನಗೆ ಗೊತ್ತಾಗುತ್ತದೆ " ಎಂದು ಹೇಳಿಕೆ ನೀಡಿದ್ದಾರೆ. ಪ್ರಧಾನಿಯ ಈ ನಿಧಾನ ಪ್ರತಿಕ್ರಿಯೆ ಬಗ್ಗೆ ವ್ಯಂಗ ಮಾಡಿರುವ ಟೆಲಿಗ್ರಾಫ್ ಪತ್ರಿಕೆ ರೋಹಿತ್ ಬಲಿಯಾದ ಬಳಿಕ ಕಳೆದ ೫ ದಿನಗಳಲ್ಲಿ  ಪ್ರಧಾನಿ ಏನೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಏನು ಮಾತನಾಡಿದರು ಎಂದು ಚಿತ್ರ ಸಹಿತ ಮುಖ ಪುಟದಲ್ಲಿ ಲೀಡ್ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News