ಅಮೆರಿಕಕ್ಕೆ ಅಪ್ಪಳಿಸಿದ ಹಿಮ ಬಿರುಗಾಳಿ: 8 ಸಾವು
Update: 2016-01-23 23:37 IST
ವಾಶಿಂಗ್ಟನ್, ಜ. 23: ಅಮೆರಿಕದ ಪೂರ್ವ ಕರಾವಳಿಗೆ ಶನಿವಾರ ಹಿಮ ಬಿರುಗಾಳಿ ಅಪ್ಪಳಿಸಿದ್ದು, ಕನಿಷ್ಠ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ವೇಳೆ, 10 ರಾಜ್ಯಗಳು ತುರ್ತು ಪರಿಸ್ಥಿತಿ ಘೋಷಣೆ ಮಾಡಿವೆ.
ಹಿಮ ಬಿರುಗಾಳಿಯು ಅಮೆರಿಕದ ರಾಜಧಾನಿ ವಾಶಿಂಗ್ಟನ್‌ನಲ್ಲಿ ದಾಖಲೆಯ 30 ಇಂಚು ಹಿಮವನ್ನು ಸುರಿಯಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿಮ ಬಿರುಗಾಳಿಯ ದಾರಿಯಲ್ಲಿರುವ ಲಕ್ಷಾಂತರ ಮಂದಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ. ಜಾರ್ಜಿಯ, ನಾರ್ತ್ ಕ್ಯಾರಲೈನ, ಟೆನಿಸೀ, ಮೇರಿಲ್ಯಾಂಡ್, ವರ್ಜೀನಿಯ, ಪೆನ್ಸಿಲ್ವೇನಿಯ, ನ್ಯೂಜರ್ಸಿ, ನ್ಯೂಯಾರ್ಕ್ ಮತ್ತು ಕೆಂಟುಕಿ ರಾಜ್ಯಗಳು ಹಿಮ ಬಿರುಗಾಳಿಯ ಹೆಚ್ಚಿನ ಪ್ರಕೋಪಕ್ಕೆ ಒಳಗಾಗಿವೆ. ವಾಶಿಂಗ್ಟನ್ ಡಿಸಿಯಲ್ಲಂತೂ ‘‘ಹಿಮ ತುರ್ತು ಪರಿಸ್ಥಿತಿ’’ಯನ್ನೇ ಘೋಷಿಸಲಾಗಿದೆ.