ಝಿಕಾ ವೈರಸ್: 2 ವರ್ಷ ಗರ್ಭ ಧರಿಸದಂತೆ ಕರೆ
Update: 2016-01-23 23:39 IST
ಮೆಕ್ಸಿಕೊ ಸಿಟಿ, ಜ. 23: ಲ್ಯಾಟಿನ್ ಅಮೆರಿಕದಲ್ಲಿ ಝಿಕ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ, ಇನ್ನೆರಡು ವರ್ಷಗಳವರೆಗೆ ಗರ್ಭ ಧರಿಸದಂತೆ ಅಲ್ಲಿನ ಸರಕಾರಗಳು ಮಹಿಳೆಯರನ್ನು ಒತ್ತಾಯಿಸಿದೆ.
ಸೊಳ್ಳೆಯಿಂದ ಹರಡುವ ವೈರಸ್‌ನಿಂದ ಉಂಟಾಗುವ ಕಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಲ್ಯಾಟಿನ್ ಅಮೆರಿಕದ ಸರಕಾರಗಳು ಅಭೂತಪೂರ್ವ ಕ್ರಮಗಳನ್ನು ತೆಗೆದುಕೊಂಡಿವೆ. ದೈಹಿಕ ನ್ಯೂನತೆಗಳೊಂದಿಗೆ ಮಕ್ಕಳು ಹುಟ್ಟುವುದಕ್ಕೂ ಈ ರೋಗಕ್ಕೂ ಸಂಬಂಧವಿದೆ ಎನ್ನಲಾಗಿದೆ.