×
Ad

ರೋಹಿತ್ ಆತ್ಮಹತ್ಯೆ

Update: 2016-01-23 23:49 IST

ಉನ್ನತ ಶಿಕ್ಷಣದಲ್ಲಿನ ತಾರತಮ್ಯ,
ಜಾತೀಯ ಸಂಸ್ಕೃತಿಯಲ್ಲಿನ
ಹಿಂಸೆಯನ್ನು ಬಿಂಬಿಸುತ್ತಿದೆ

  ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿರುವ ಜಾತಿಯಾಧಾರಿತ ಹಿಂಸೆಯ ಬಗೆಗಿನ ಮುಖ್ಯವಾದ ಪ್ರಶ್ನೆಗಳನ್ನು ಮುಂದಕ್ಕೆ ತರುತ್ತದೆ. ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ನಡೆಯುತ್ತಿರುವ ಸಂಘರ್ಷದ ಮತ್ತು ವಿಶ್ವವಿದ್ಯಾನಿಲಯದ ಆಡಳಿತವು ಅದನ್ನು ನಿಭಾಯಿಸಿದ ಅಸಮರ್ಥತೆಯ ರೀತಿಯ ಪರಿಣಾವಾಗಿ ಈ ದುಃಖಕರ ಘಟನೆ ನಡೆದಿದೆಯಾದರೂ, ರೋಹಿತ್ ಸಾವನ್ನು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ವಿಸ್ತಾರವಾದ ಯೋಜನೆಯ ಅಂಗವಾಗಿ ನೋಡಬೇಕಾದ ಅಗತ್ಯವಿದೆ. ರೋಹಿತ್ ಆತ್ಮಹತ್ಯೆ ಒಂದು ಪ್ರತ್ಯೇಕವಾದ ಉದಾಹರಣೆಯಲ್ಲ; ಕೇವಲ ಹೈದರಾಬಾದ್ ವಿಶ್ವವಿದ್ಯಾನಿಲಯ ಒಂದರಲ್ಲೇ ಕಳೆದ ಏಳು ವರ್ಷಗಳಲ್ಲಿ ಒಂಬತ್ತು ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಅವರೆಲ್ಲರೂ ದಲಿತ ಅಥವಾ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರು. ಎಲ್ಲಾ ಪ್ರಕರಣಗಳಲ್ಲೂ ಸಾಮಾಜಿಕವಾಗಿ ಸೀಮಿತಗೊಳಿಸಲಾದ ಗುಂಪುಗಳ ಜೊತೆ ಸರಿದೂಗಿಸುವಲ್ಲಿ ಸಂಸ್ಥೆಗಳ ಅಸಮರ್ಥತೆ ಮುಖ್ಯ ಪ್ರಚೋದನಾಕಾರಿ ಅಂಶವಾಗಿತ್ತು.

 ಭಾರತದಲ್ಲಿ ಶೈಕ್ಷಣಿಕ ಸ್ಥಳಗಳನ್ನು ಪ್ರಮುಖವಾಗಿ ಉನ್ನತ ಜಾತಿಯ, ಅಧಿಕೃತ ಮೀಸಲಾತಿ ನೀತಿಯ ಬಗ್ಗೆ ಹಗೆತನವನ್ನು ಅಡಿಗೆರೆಯಾಗಿ ನಿರೂಪಿಸಿರುವ-ಸೀಮಿತ ವರ್ಗದ ಹಿಂದುಳಿದ ವಿದ್ಯಾರ್ಥಿಗಳ ವಿರುದ್ಧ, ಅವರ ಶೈಕ್ಷಣಿಕ ಸಾಧನೆ ಮತ್ತು ಪ್ರತಿಭೆಯನ್ನು ಪರಿಗಣಿಸದೆ ಕೇವಲ ಹೇಸಿಗೆ ಮತ್ತು ದ್ವೇಷವನ್ನು ಹರಿಸುವ ಸ್ಥಳಗಳನ್ನಾಗಿ ರೂಪಿಸಲಾಗಿರುತ್ತದೆ ಎಂಬುದನ್ನು ಕಾಲಕಾಲಕ್ಕೆ ತೋರಿಸಲಾಗಿದೆ.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ನಲ್ಲಿ ಎಸ್ಸಿ/ಎಸ್ಟಿ ವಿದ್ಯಾರ್ಥಿಯ ಮೇಲೆ ನಡೆದ ತಾರತಮ್ಯ ಮತ್ತು ಅದೇ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಲು 2006ರಲ್ಲಿ ನಿಯೋಜಿಸಲಾದ ತೋರಟ್ ಸಮಿತಿ ಕಂಡುಕೊಂಡ ಅಂಶಗಳು ಪ್ರಮುಖವಾಗುತ್ತವೆ. ಅಂದು ಯುಜಿಸಿ ಮುಖ್ಯಸ್ಥರಾಗಿದ್ದ ಸುಖ್ ದೇವ್ ತೋರಟ್ ಸಲ್ಲಿಸಿದ ವರದಿಯು, ಎಐಐಎಂಎಸ್‌ನ ಪ್ರೊಫೆಸರ್ ವಿದ್ಯಾರ್ಥಿಗಳನ್ನು ಬೆದರಿಸಲು ಪ್ರಯತ್ನಿಸಿದ ಮತ್ತು ಅವರನ್ನು ಸಮಿತಿಯ ಮುಂದೆ ಪದಚ್ಯುತಿಗೊಳಿಸದಂತೆ ತಡೆದ ರೀತಿಯು ದಲಿತ ವಿದ್ಯಾರ್ಥಿಗಳು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಅನುಭವಿಸುವ ಸಾಮಾಜಿಕ ಪ್ರತ್ಯೇಕತೆ ಮತ್ತು ದಬ್ಬಾಳಿಕೆಯನ್ನು ತೋರಿಸುತ್ತದೆ. ದಿಲ್ಲಿಯ ಎಐಐಎಂಎಸ್‌ನಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಬಗ್ಗೆ ಭೇದಭಾವ ತೋರ್ಪಡಿಸುವ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂಬ ಸಮಿತಿಯ ವರದಿಯು ಮಂಡಲ ಯುಗದ ಆಕ್ರಮಣಕಾರಿ ಮೀಸಲಾತಿ ವಿರೋಧಿಗಳು ಅಧಿಕಾರದ ಪ್ರಮುಖ ಸ್ಥಾನಗಳನ್ನು ವಶಮಾಡಿಕೊಂಡಿರುವ ರೀತಿ ಮತ್ತು ಸಂಸ್ಥೆಗಳಿಗೆ ಪ್ರವೇಶದ ಮೇಲೆ ಕಟ್ಟುನಿಟ್ಟಾಗಿ ನಿಗಾಯಿಡುತ್ತಿದ್ದ ಕಾರಣ ಎಐಐಎಂಎಸ್‌ನಲ್ಲಿ ಅಧ್ಯಾಪಕವರ್ಗವನ್ನು ಆಯ್ಕೆ ಮಾಡುವಾಗ ಮತ್ತು ಮೀಸಲಾತಿ ನೀತಿಯನ್ನು ಅನುಷ್ಠಾನಕ್ಕೆ ತರುವಾಗ ಗಂಭೀರ ರೀತಿಯ ಅಕ್ರಮಗಳು ನಡೆಯುತ್ತಿದ್ದ ಬಗ್ಗೆ ವ್ಯವಸ್ಥಿತವಾಗಿ ವಿವರಿಸಿತ್ತು. ವರದಿಯು, ಕೆಳಜಾತಿಯ ವಿದ್ಯಾರ್ಥಿಗಳ ವಿರುದ್ಧ ಅವರ ಜೀವನದ ಪ್ರತೀ ಹಂತದಲ್ಲೂ ಆಕ್ರೋಶವನ್ನು ಎತ್ತಿ ತೋರಿಸಿತ್ತು-ತರಗತಿಯಿಂದ ಅಧ್ಯಾಪಕರ ಪ್ರತಿಸ್ಪಂದನೆಯವರೆಗೆ, ಹಾಸ್ಟೆಲ್‌ನಿಂದ, ಮೆಸ್‌ನಿಂದ ಪರೀಕ್ಷೆಗಳವರೆಗೆ-ಸಂಸ್ಥೆಗಳ ಸಾಮುದಾಯಿಕ ಚಟುವಟಿಕೆಗಳಿಂದ ಅವರನ್ನು ನಿಷೇಧಿಸುವುದು ಒಂದು ಕಹಿ ವಾಸ್ತವ. ಸಮಿತಿಯು ಶೈಕ್ಷಣಿಕ ಸಂಸ್ಥೆಗಳ ಆಡಳಿತದ ಅಭಿವೃದ್ಧಿಗಾಗಿ ಹಲವು ನಿರ್ದಿಷ್ಟ ಸಲಹೆಗಳನ್ನು ನೀಡಿತು, ಆದರೆ ಒಂದು ದಶಕದ ನಂತರವೂ ಹಾಗೆ ನೀಡಿದ ಸಲಹೆಗಳ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಸಮಾಜಶಾಸ್ತ್ರಜ್ಞ ಸಶೀಜ್ ಹೆಗ್ಡೆ ಅವರು ಮುಖ್ಯಸ್ಥರಾಗಿದ್ದ ಸಮಿತಿಯು 2014ರಲ್ಲಿ ಸೀಮಿತಗೊಳಿಸಲ್ಪಟ್ಟ ಹಿನ್ನೆಲೆಯ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ರಚನೆಯೊಳಗೆ ಪರಕೀಯತನದ ಭಾವವನ್ನು ಮತ್ತು ಅಸಮಾಧಾನವನ್ನು ಅನುಭವಿ ಸುತ್ತಾರೆ, ತಕ್ಷಣ ಈ ಬಗ್ಗೆ ಗಮನಹರಿಸುವ ಅಗತ್ಯವಿದೆ ಎಂದು ತಿಳಿಸಿತ್ತು. ಬೊಟ್ಟು ಮಾಡಲೇ ಬೇಕಾದ ಅಂಶವೆಂದರೆ, ಪ್ರೊ. ಹೆಗ್ಡೆಯವರ ವರದಿಯಲ್ಲಿ ಕಂಡುಬಂದ ಅಂಶವನ್ನು ಚರ್ಚಿಸುವ ಸಲುವಾಗಿ ಕರೆಯಲಾದ ಎಲ್ಲಾ ಅಧ್ಯಾಪಕರ ಸಭೆಯಲ್ಲಿ ನೈಸರ್ಗಿಕ ವಿಜ್ಞಾನ ವಿಭಾಗದ ಸದಸ್ಯರು ಸಮಿತಿಯ ವಾದವನ್ನು ತೀವ್ರವಾಗಿ ವಿರೋಧಿಸಿದರು ಮತ್ತು ಅವರ ವಾದವನ್ನು ಸಾಬೀತುಪಡಿಸಲು ‘ವೈಜ್ಞಾನಿಕ ಸಾಕ್ಷಿ’ಯನ್ನು ಕೇಳಿದರು. ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸಂದರ್ಭದಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳ ಆಡಳಿತವರ್ಗಗಳ ಪ್ರತಿಕ್ರಿಯೆ ವ್ಯಕ್ತಿಗಳನ್ನು ಮಾನಸಿಕ ಅಸ್ವಸ್ಥನಂತೆ ನಡೆಸಿಕೊಳ್ಳುವುದು ಮತ್ತು ಅವರ ವೈಯಕ್ತಿಕ ಲೋಪಗಳನ್ನು ದೂರುವುದು. ಒಂದು ನಿರ್ದಿಷ್ಟ ಪ್ರತಿಕ್ರಿಯೆಯೆಂದರೆ ವಿಷಯವನ್ನು ಮಾನಸಿಕಗೊಳಿಸುವುದು ಮತ್ತು ಕಾಲೇಜ್ ಆವರಣದಲ್ಲಿ ಮನಃಶಾಸ್ತ್ರಜ್ಞರನ್ನು ಒದಗಿಸುವುದು, ಆ ರೀತಿ ಜಾತಿ ಆಧಾರಿತ ಆಕ್ರೋಶ ಮತ್ತು ಹಿಂಸೆಯ ಸಾಮಾಜಿಕ ಆಧಾರವನ್ನು ಒಪ್ಪಿಕೊಳ್ಳುವಲ್ಲಿ ಉದಾಸೀನತೆ ತೋರುವುದು. 2013ರಲ್ಲಿ, ಸಮಾಜಶಾಸ್ತ್ರಜ್ಞ ಸತೀಶ್ ದೇಶಪಾಂಡೆ ಮತ್ತು ಉಷಾ ಝಕಾರಿಯಾಸ್‌ರಿಂದ ಸಂಪಾದಿಸಲ್ಪಟ್ಟ, ಒಂದು ಗಮನಾರ್ಹ ಕೆಲಸ, ಅಂತರ್ವೇಶನದಿಂದ ಆಚೆಗೆ: ಭಾರತೀಯ ಉನ್ನತ ಶಿಕ್ಷಣದಲ್ಲಿ ಸಮನಾದ ಪ್ರವೇಶದ ಅಭ್ಯಾಸ (2013), ಮೀಸಲಾತಿಯ ನೀತಿಯ ಮೂಲಕ ಸಾಮಾನ್ಯ ಒಳಗೂಡಿಸುವಿಕೆಯನ್ನು ವಿಷಯವನ್ನು ಆವರಿಸಿರುವ ಗಂಭೀರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು. ಉದಾಹರಣೆಗೆ, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಕಲಿತ ದಿಲ್ಲಿ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನಿ ಎನ್. ಸುಕುಮಾರ್, ‘‘ವಿಶ್ವವಿದ್ಯಾನಿಲಯವು ಹೇಗೆ ಈಗಲೂ ಬ್ರಾಹ್ಮಣೀಯ ಸ್ಥಳವಾಗಿ ಮುಂದುವರಿದಿದೆ ಎಂಬುದು ಓರ್ವ ಅಧ್ಯಾಪಕ ತನಗೆ ಸಾಂಪ್ರದಾಯಿಕ ಸ್ನಾನ ಮಾಡಲು ಅವಕಾಶ ಮಾಡಿಕೊಟ್ಟರೆ ಮಾತ್ರ ಗಣಿತ ವಿಭಾಗದಲ್ಲಿರುವ ಸ್ಥಾನ ತುಂಬಲು ಒಪ್ಪುತ್ತೇನೆ ಎಂದು ಹೇಳಿದ್ದಕ್ಕೆ ಅದ್ಹೇಗೆ ಅವರಿಗಾಗಿ ವಿಶೇಷ ಬಾವಿಯನ್ನು ತೋಡಲಾಯಿತು ಎಂಬುವುದರಲ್ಲಿ ಸ್ಪಷ್ಟವಾಗುತ್ತದೆ’’ ಎಂದು ಬೊಟ್ಟು ಮಾಡುತ್ತಾರೆ. ಮತ್ತೊಂದು ಕಡೆ, ದಲಿತ ವಿದ್ಯಾರ್ಥಿಗಳು ಮೆಸ್ ನಲ್ಲಿ ಹೆಚ್ಚು ತಿಂಡಿಯನ್ನು ತಿನ್ನುತ್ತಾರೆ ಹಾಗಾಗಿ ಮೆಸ್ ಬಿಲ್ ಹೆಚ್ಚು ಬರುತ್ತದೆ ಎಂಬ ಮೇಲ್ಜಾತಿಯ ವಿದ್ಯಾರ್ಥಿಗಳ ಕುಟುಕು ನುಡಿಗಳನ್ನು ಅವರು ನೋವಿನಿಂದಲೇ ವಿವರಿಸುತ್ತಾರೆ.

 ಅದೇ ಆವೃತ್ತಿಯಲ್ಲಿ, ದಶಕಗಳಿಂದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿಯಾಧಾರಿತ ಹಿಂಸೆ ಯನ್ನು ಬೆಳಕಿಗೆ ತರುವ ಅಭಿಯಾನವನ್ನು ಮುನ್ನಡೆಸುತ್ತಿರುವ ಇನ್ ಸೈಟ್ ಪ್ರತಿಷ್ಠಾನದ ಕಾರ್ಯಕರ್ತ ಅನೂಪ್ ಕುಮಾರ್ ಪ್ರಕಾರ, ಭಾರತೀಯ ಶಿಕ್ಷಣ ಸಂಸ್ಥೆಗಳ ಚಾರಿತ್ರ್ಯವನ್ನು ಜಾತೀಯ ಸಂಸ್ಕೃತಿಯ ಸ್ವಾಭಾವಿಕ ವಿಸ್ತರಣೆಯಾಗಿ ಪರಿಗಣಿಸುವುದು ಮುಖ್ಯ. ಈ ಸನ್ನಿವೇಶದಿಂದ, ಮೀಸಲಾತಿ ನೀತಿಯನ್ನು ದೂರುವ ಮೂಲಕ ಮತ್ತು ಶ್ರೇಷ್ಠ ಸಂಸ್ಥೆಗಳ ಒತ್ತಡವನ್ನು ಸಹಿಸಿಕೊಳ್ಳುವಲ್ಲಿ ಅಸಮರ್ಥರಾದರು ಎಂದು ವಿದ್ಯಾರ್ಥಿಗಳನ್ನೇ ದೂರುವ ಮೂಲಕ ದಲಿತ ಆತ್ಮಹತ್ಯೆಯನ್ನು ಸ್ವಾಭಾವಿಕಗೊಳಿಸುವ ಪ್ರಕ್ರಿಯೆ ಆರಂಭವಾಗುತ್ತದೆ. ಹಲವು ವರ್ಷಗಳಿಂದ ಕುಮಾರ್ ತಯಾರಿಸಿದ ದಾಖಲೆಗಳು ಹೇಳುವಂತೆ, ಸತ್ಯ ವಿರುದ್ಧವಾಗಿದೆ: ತಮ್ಮ ಪ್ರಾಣಕ್ಕೆ ಅಂತ್ಯ ಹಾಡುವ ಬಹಳಷ್ಟು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಿದವರಾಗಿದ್ದಾರೆ ಮತ್ತು ಅವರ ‘ಸಮಾನತೆಯ ವರ್ತನೆ ತೋರಿ’ ಎಂಬ ಆಗ್ರಹ ಶೈಕ್ಷಣಿಕ ಸಂಸ್ಥೆಗಳನ್ನು ಇರಿಸುಮುರುಸುಗೊಳಿಸುತ್ತವೆ. ವಾಸ್ತವದಲ್ಲಿ ಸಮಾಜಶಾಸ್ತ್ರಜ್ಞ, ದಿಲ್ಲಿ ಸ್ಕೂಲ್ ಆಫ್ ಇಕನಾ ಮಿಕ್ಸ್‌ನ ಸತೀಶ್ ದೇಶಪಾಂಡೆ, ‘‘ಸರಕಾರದ ಪರಿಹಾರಾರ್ಥ ಸಕಾರಾತ್ಮಕ ಕ್ರಿಯೆಗಳು ಕೆಳಜಾತಿಯ ಗುರುತಿನ ಗೋಚರತೆಯನ್ನು ಪ್ರಚೋದಿಸುತ್ತದೆ, ಅದು ಮಂಡಲ ವಿರೋಧಿ ಪ್ರತಿಭಟನೆಯ ನಂತರ ಮತ್ತಷ್ಟು ತೀವ್ರವಾಗಿದೆ’’ ಎಂದು ವಾದಿಸುತ್ತಾರೆ. ಅವರ ಪ್ರಕಾರ ಮೀಸಲಾತಿ ವರ್ಗವು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶದ ಸಮಯದಲ್ಲಿ ಒಂದು ಗುರುತಿನ ಅಂಶವಾಗುತ್ತದೆ, ಬದಲಿಗೆ ಮೇಲ್ಜಾತಿಯ ಗುರುತು ‘ಸಾಮಾನ್ಯ ವರ್ಗ’ ಎಂಬ ಜಾತ್ಯತೀತ ಪದದಲ್ಲಿ ಅಡಕವಾಗಿ ಬಿಡುತ್ತದೆ.
ಇತರ ಮುದ್ರಣಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಾಮಾಜಿಕ ಮಾನವಶಾಸ್ತ್ರಜ್ಞ ಅಜಂತಾ ಸುಬ್ರಹ್ಮಣ್ಯನ್, ‘‘ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹತೆ ಎಂದು ಯಾವುದನ್ನು ಅರ್ಥಮಾಡಿಕೊಳ್ಳಲಾಗಿದೆಯೋ ಅದು ಕೇವಲ ಭಾರತದ ಮೇಲ್ಜಾತಿಯ ಗಣ್ಯರ ಕ್ರೋಡೀಕರಿಸಿದ ಸಾಂಸ್ಕೃತಿಕ ರಾಜಧಾನಿಯೇ ಆಗಿದೆ’’ ಎಂದು ಹೇಳುತ್ತಾರೆ.
ಇದೇ ಪರಿಸ್ಥಿತಿಗಳಲ್ಲಿ ಯುವ ವಿದ್ಯಾರ್ಥಿಯೋರ್ವ ತನ್ನ ಪ್ರಾಣವನ್ನೇ ಕೊನೆಗೊಳಿಸುವಂಥ ಸರಿಪಡಿಸಲಾಗದ ಹೆಜ್ಜೆಯನ್ನಿಟ್ಟಿದ್ದಾನೆ. ಘಟನೆಯ ಬಗ್ಗೆ ಬಹಳ ದುಃಖಕರ ಸಂಗತಿಯೆಂದರೆ ನಮ್ಮ ಶಿಕ್ಷಣ ಸಂಸ್ಥೆಗಳು ಕಲ್ಲು ಮನಸ್ಸಿನವರಂತೆ ಓರ್ವ ಪ್ರತಿಭಾವಂತ, ಕಾರ್ಲ್ ಸಗನ್‌ರಂತೆ ಓರ್ವ ವೈಜ್ಞಾನಿಕ ಲೇಖಕನಾಗಬೇಕೆಂದು ಬಯಸಿದ್ದ ಸೆಂಥಿಲ್ ಕುಮಾರ್, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮತ್ತೋರ್ವ ದಲಿತ ವಿದ್ಯಾರ್ಥಿ. ತಾನು ನೊಬೆಲ್ ಪ್ರಶಸ್ತಿಯನ್ನು ಪಡೆಯಲು ಬಯಸುತ್ತೇನೆ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಮತ್ತು ಕೆಲಸದಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಬರೆದಿದ್ದ. ಇದು, ಅಮಾರ್ತ್ಯ ಸೇನ್ ಅವರ ಶಬ್ದಗಳಲ್ಲಿ, ಒಂದು ಪ್ರತಿಭೆಯ ಸಹಿಸಲಾಗದ ನಷ್ಟ.

ರೋಹಿತ್ ವೇಮುಲಾ ಓರ್ವ ಅತ್ಯಂತ ಪ್ರತಿಭಾವಂತ ಮತ್ತು ರಾಜಕೀಯವಾಗಿ ಗಟ್ಟಿತನ ಹೊಂದಿದ್ದ ವಿದ್ಯಾರ್ಥಿ. ಆತ ಎರಡು ವಿಭಾಗಗಳಲ್ಲಿ ಕಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಮತ್ತು ಸಾಮಾಜಿಕವಾಗಿ ಪ್ರಜ್ಞಾಪೂರ್ಣ ಮತ್ತು ಅಭಿವ್ಯಕ್ತಗೊಳಿಸುವಂತಹ ವಿದ್ಯಾರ್ಥಿಯಾಗಿದ್ದ. ಆತನನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ ಪರಿಸ್ಥಿತಿಯು ನಮ್ಮನ್ನು ಒಂದರೆ ಕ್ಷಣ ನಿಲ್ಲುವಂತೆ ಮಾಡುತ್ತದೆ ಮತ್ತು ಭಾರತಕ್ಕೆ ಹೊಸ ಶಿಕ್ಷಣ ನೀತಿಯನ್ನು ಚರ್ಚಿಸುವ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸೂಚ್ಯವಾಗಿರುವ ಹಿಂಸೆಯ ಬಗ್ಗೆ ಅರಿಯುವಂತೆ ಮಾಡುತ್ತದೆ

Writer - ವಿಕ್ರಂ ಚುಕ್ಕ

contributor

Editor - ವಿಕ್ರಂ ಚುಕ್ಕ

contributor

Similar News