ದುಬೈಯ ಶ್ರೀಮಂತರ ಮನೆಬಾಗಿಲಿಗೆ ವೀಸಾ ತಂದು ಕೊಡುತ್ತಿರುವ ಬ್ರಿಟನ್
ದುಬೈ:ಶ್ರೀಮಂತರಲ್ಲಿ ಅತ್ಯಧಿಕ ಪ್ರೀತಿ ತೋರಿಸುವ ರಾಷ್ಟ್ರ ಬ್ರಿಟನ್ ಆಗಿದೆ. ಪ್ರಜಾಪ್ರಭುತ್ವ ದೇಶ ಇದಾದರೂ ಭಾರೀ ಶ್ರೀಮಂತರಿಗೆ ಮಣೆ ಹಾಕುವುದರಲ್ಲಿ ಮೊದಲ ಸಾಲಿನಲ್ಲಿದೆ. ಈ ದುಬೈ ಶ್ರೀಮಂತರಿಗೆ ವಿಐಪಿ ವೀಸಾ ಯೋಜನೆಯ ಮೂಲಕ ಬ್ರಿಟನ್ ಅವರ ಮುಂದೆ ತಲೆತಗ್ಗಿಸುತ್ತಿದೆ.
ಹೊಸ ಕ್ರಮಗಳ ಪ್ರಕಾರ ದುಬೈಯ ಭಾರೀ ಶ್ರಿಮಂತರಿಗೆ ಬ್ರಿಟನ್ ವೀಸಾ ಪಡೆಯಲು ಕ್ಯೂ ನಿಲ್ಲಬೇಕಾಗಿಲ್ಲ. ಬ್ರಿಟಿಷ್ ಅಂಬೆಸಿ ಅಧಿಕಾರಿಗಳು ಸ್ವತಃ ಅವರ ಮನೆಗೆ ಹೋಗಿ ವೀಸಾ ನೀಡಲಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ, ಸರಿಪಡಿಸಿ ಬಯೋಮೆಡಿಕ್ಸ್ ದಾಖಲಿಸಿ ಸುಲಭವಾಗಿ ವೀಸಾ ಶ್ರೀಮಂತರಿಗೆ ಒಪ್ಪಿಸಲಿದ್ದಾರೆ. ಇದರೊಂದಿಗೆ ದುಬೈಯ ಭಾರೀ ಶ್ರೀಮಂತರಿಗೆ ವಿಐಪಿ ವೀಸಾ ನೀಡುವ ಮೊದಲ ರಾಷ್ಟ್ರ ಎಂಬ ಪರಿಗಣನೆಯನ್ನು ಪಡೆದುಕೊಳ್ಳುತ್ತಿದೆ.
ಪ್ಲಾಟಿ ವಿಐಪಿ ಸರ್ವಿಸ್ ಎನ್ನಲಾದ ಹೊಸ ವೀಸಾಗಳಿಗೆ 750 ಪೌಂಡ್ ನೀಡಿದರಾಯಿತು. ಈ ವೀಸಾಕ್ಕೆ ನೋಂದಣಿ ಮಾಡುವವರ ಮನೆಗೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ವೀಸಾವನ್ನು ಕೈಯಲ್ಲಿ ಕೊಟ್ಟು ಹೋಗುವರು. ಎಂಬಸಿಯ ಲಾಜಿಂಗಿನಲ್ಲಿ ಕುಳಿತು ಅಥವಾ ತಮ್ಮ ಕಚೇರಿಯಲ್ಲಿ ಕುಳಿತು ವೀಸಾ ಪಡೆದುಕೊಳ್ಳಲು ಸಾಧ್ಯವಿದೆ.
750ಪೌಂಡ್ ಭರ್ತಿ ಮಾಡಲು ಆಗದವರಿಗಾಗಿ 435 ಪೌಂಡ್‌ನ ಪ್ಲಾಟಿನಂ ಲಾಂಜ್ ಯೋಜನೆಯೂ ಇದೆ. ಈ ವೀಸಾವನ್ನೂ ಕ್ಯೂ ನಿಲ್ಲದೆ ಪಡೆಯಬಹುದಾಗಿದೆ. 750 ಪೌಂಡ್ ಕೊಟ್ಟವರಿಗೆ 24 ಗಂಟೆಯೊಳಗೆ ವೀಸಾ ತಲುಪಲಿದೆ. ದುಬೈಯ ಭಾರೀ ಶ್ರೀಮಂತರನ್ನು ಬ್ರಿಟನ್‌ಗೆ ಆಕರ್ಷಿಸಲಿಕ್ಕಾಗಿ ಈ ಯೋಜನೆ ಆವಿಷ್ಕರಿಸಲಾಗಿದೆ, ಈಗಾಗಲೇ ಕಡಿಮೆ ಅವಧಿ ವೀಸಾ ಯೋಜನೆ ಚಾಲ್ತಿಯಲ್ಲಿದ್ದರೂ ನಲ್ವತ್ತು ಗಂಟೆಗಳ ಕಾಲ ಕಾಯಬೇಕಿತ್ತು.
ಹೊಸ ಯೋಜನೆ ಮೂಲಕ ಶ್ರೀಮಂತರಿಗೆ ಯಾವುದೇ ಕಿರಿಕಿರಿಯಿಲ್ಲದ 24 ಗಂಟೆಗಳೊಳಗೆ ಮನೆ ಬಾಗಿಲಿಗೆ ವೀಸಾವನ್ನು ತಲುಪಿಸುವ ವ್ಯವಸ್ಥೆಯನ್ನು ಬ್ರಿಟನ್ ತಂದಿದೆ.
ಕೃಪೆ: ಮರುನಾಡನ್ ಮಲೆಯಾಳಿ