ಮರಳಿಸಿದ ಪ್ರಶಸ್ತಿಯನ್ನು ಪುನಃ ತೆಗೆದುಕೊಳ್ಳಲಾರೆಃ ವಾಜಪೇಯಿ
Update: 2016-01-24 12:52 IST
ಜೈಪುರ: ಪ್ರಸಿದ್ಧ ಕವಿ ಅಶೋಕ್ ವಾಜಪೇಯಿ ಶನಿವಾರ ದೇಶದಲ್ಲಿ ಅಸಹಿಷ್ಣುತೆಯ ವಿಚಾರವಾಗಿ ಹಿಂದುರಿಗಿಸಿರುವ ಪ್ರಶಸ್ತಿಯನ್ನು ಮರಳಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಲೇಖಕಿ ನಯನತಾರ ಸೆಹಗಲ್ ಅಕಾಡಮಿ ವಾಜಪೇಯಿ ಪುರಸ್ಕರವನ್ನು ಮರಳಿ ಪಡೆಯಲಿದ್ದಾರೆ ಎಂಬ ಅಕಾಡಮಿಯ ವಾದವನ್ನು ಖಂಡಿಸಿರು ಹಿನ್ನೆಲೆಯಲ್ಲಿ ವಾಜಪೇಯಿ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಅಕಾಡಮಿ ಗುರುವಾರ ಸೆಹಗಲ್ ಮತ್ತು ಇತರ ಇಬ್ಬರು ಸಾಹಿತಿಗಳು ತಮ್ಮ ಪುರಸ್ಕಾರವನ್ನು ಮರಳಿ ಪಡೆಯಲು ಸಮ್ಮತಿಸಿದ್ದಾರೆ ಎಂದು ಹೇಳಿತ್ತು. ಜೈಪುರ್ ಸಾಹಿತ್ಯ ಉತ್ಸವದ ವೇಳೆ ವಾಜಪೇಯಿಯವರು ಪ್ರಶಸ್ತಿಯನ್ನು ಪಡೆಯುವ ಯಾವ ಇಚ್ಛೆಯೂ ತನಗಿಲ್ಲ ಯಾಕೆಂದರೆ ದೇಶದಲ್ಲಿ ಈಗಲೂ ಅಸಹಿಷ್ಣುತೆಯ ವಾತಾವರಣ ಇದೆ.
ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಅಸಹಿಷ್ಣುತೆಯ ಬೇರೆ ರೂಪವಾಗಿದೆ ಎಂದು ಹೇಳಿದ್ದಾರೆ. ಕೃಪೆಃ ದೇಶ ಬಂಧು