×
Ad

ಬ್ರಿಟನ್‌ನಲ್ಲೊಬ್ಬ ಮದುವೆ ಲೋಲ

Update: 2016-01-24 17:45 IST

ಬ್ರಿಟನ್: ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳುವುದು ಪಾಶ್ಚಾತ್ಯರಿಗೆ ನೀರು ಕುಡಿದಷ್ಟು ಸುಲಭ. 67ವರ್ಷದ ಬ್ರಿಟನ್ನಿನ ಮುದುಕ ರೋನ್ ಶೆಫರ್ಡ್ 17 ವರ್ಷಗಳಿಂದ ತನ್ನೊಂದಿಗೆ ಜೀವಿಸುತ್ತಿರುವ 37 ವರ್ಷ ಪ್ರಾಯದ ಪತ್ನಿ ವೆಂಗ್ ಪ್ಲಾಟಿನಿಗೆ ವಿಚ್ಛೇದನ ಕೊಟ್ಟು ಹೊಸದಾಗಿ ಮದುವೆಯಾಗುವ ಸಿದ್ಧತೆ ನಡೆಸುತ್ತಿದ್ದಾನೆ. ಇದು ಅವನಿಗೆ ಒಂಬತ್ತನೆ ವಿವಾಹ ಆಗಲಿದೆ.  ವಿದೇಶಿ ಮಹಿಳೆಯರನ್ನೇ ಮದುವೆ ಆಗುವುದು ಅವನ ಶೋಕಿಯಾಗಿದೆ.ಈ ವರೆಗೆ ಅವನು ಎಲ್ಲ ಮದುವೆಯನ್ನು ವಿದೇಶದ ಮಹಿಳೆಯರೊಂದಿಗೆ ಮಾಡಿಕೊಂಡಿದ್ದ ಒಂಬತ್ತನೆ ವಧುವಾಗಿ ಅವನು 27 ವರ್ಷ ಹರೆಯದ ಫಿಲಿಪ್ಫಿನ್ಸ್‌ನ ಕ್ರಿಸ್ಟಲ್ ಮಾರ್ಕೊಸ್‌ಳನ್ನು ಆಯ್ಕೆ ಮಾಡಿದ್ದಾನೆ. ಅವಳುಕಾಲ್ ಸೆಂಟರ್ ಒಂದರ ಉದ್ಯೋಗಿಯಾಗಿದ್ದಾಳೆ. ಆನ್‌ಲೈನ್ ಚಾಟಿಂಗ್ ಮೂಲಕ ರೋನ್ ಮತ್ತು ಕ್ರಿಸ್ಟಲ್ ನಿಕಟವಾಗಿದ್ದರು. ಕ್ರಿಸ್ಟಲ್‌ಗೆ ಹದಿನೈದು ವಯಸಾದಾಗಲೆ ಇವರಿಬ್ಬರಿಗೆ ಪರಿಚಯವಿತ್ತು ಎನ್ನಲಾಗಿದೆ. ಅಂದು ಎಂಟನೆ ಪತ್ನಿ ವಾನ್‌ಳನ್ನು ಮದುವೆ ಆಗಿ ರೋನ್ ಆಗ ತಾಯ್ಲೆಂಡ್‌ನಲ್ಲಿದ್ದ. ಹಿಂದಿನ ಹೆಂಡತಿ ವಾನ್‌ಳ್‌ನ್ನು ತೊರೆದು ಅವನು ವೆಂಗ್‌ಳನ್ನು ಆತ ವಿವಾಹವಾಗಿದ್ದ.

ಹನ್ನೊಂದು ವರ್ಷದ ದಾಂಪತ್ಯದ ನಂತರ ಅವರಿಬ್ಬರೂ ಬೇರೆ ಬೇರೆ ಯಾದರು. ಪಶ್ಚಿಮೇಶ್ಯಕ್ಕೆ ಹೋಗಿದ್ದಾಗ ವೆಂಗ್‌ಗಳಿಗೆ ರೋನ್‌ನ ಕಳ್ಳ ಕಥೆಗಳು ಗೊತ್ತಾಗಿತ್ತು. ಅವಳು ವೆಂಗ್ ಅವನನ್ನು ತೊರೆಯಲು ತೀರ್ಮಾನಿಸಿದ್ದಳು ಆದುದರಿಂದ ಆತ ಹೊಸ ಹುಡುಗಿಯನ್ನು ಹುಡುಕಿಕೊಂಡಿದ್ದಾನೆ. ಈವರೆಗೆ ಬ್ರಿಟನ್‌ನ ಸಾಮರ್‌ಸೆಟ್‌ನಲ್ಲಿ ವೆಂಗ್‌ಳೊಂದಿಗೆ ಅವನು ವಾಸಿಸುತ್ತಿದ್ದ. ರೋನ್ ಎಂಟು ಮಕ್ಕಳ ತಂದೆ ಮತ್ತು ಹದಿಮೂರು ಮೊಮ್ಮಕ್ಕಳು ಅವನಿಗಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News