ಭಾರತ, ಬಹ್ರೇನ್ ನಡುವೆ ಕೈದಿಗಳ ಹಸ್ತಾಂತರ ವಿದೇಶ ಸಚಿವರಿಂದ ಒಪ್ಪಂದಕ್ಕೆ ಸಹಿ

Update: 2016-01-24 16:56 GMT

ಮನಾಮ, ಜ. 24: ವ್ಯಾಪಾರ ಮತ್ತು ಭಯೋತ್ಪಾದನೆ ನಿಗ್ರಹ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಹೊಂದಿರುವ ಬಾಂಧವ್ಯವನ್ನು ಗಟ್ಟಿಗೊಳಿಸಲು ಭಾರತ ಮತ್ತು ಬಹ್ರೇನ್ ನಿರ್ಧರಿಸಿವೆ.


ಶನಿವಾರ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮತ್ತು ಮತ್ತು ಬಹ್ರೇನ್‌ನ ವಿದೇಶ ವ್ಯವಹಾರಗಳ ಸಚಿವ ಖಾಲಿದ್ ಬಿನ್ ಅಹ್ಮದ್ ಅಲ್ ಖಲೀಫ ವಿವಿಧ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.


ಭಾರತ-ಅರಬ್ ಲೀಗ್ ಸಹಕಾರ ವೇದಿಕೆಯ ಮೊದಲ ಸಚಿವ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಸುಶ್ಮಾ ಬಹ್ರೇನ್ ರಾಜಧಾನಿ ಮನಾಮಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ.


ಮಾತುಕತೆಯ ಬಳಿಕ ಉಭಯ ನಾಯಕರು, ಶಿಕ್ಷೆಗೊಳಗಾದ ಕೈದಿಗಳನ್ನು ಹಸ್ತಾಂತರಿಸುವ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಪ್ರಕಾರ, ವಲಸಿಗರು ತಾವು ನೆಲೆಸಿರುವ ದೇಶದಲ್ಲಿ ಶಿಕ್ಷೆಗೊಳಗಾದರೆ, ಅವರು ಶಿಕ್ಷೆಯನ್ನು ತಮ್ಮ ಸ್ವದೇಶದಲ್ಲಿ ಅನುಭವಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News