×
Ad

ಜನರು ನೋಡುತ್ತಿದ್ದಂತೆಮುನ್ನೂರು ಕಿಲೋ ತೂಕ 45 ಅಡಿ ಉದ್ದದ ತಿಮಿಂಗಿಲ ಬಂಡೆಕಲ್ಲಿಗೆ ತಲೆಬಡಿದು ಸಾವ

Update: 2016-01-24 23:08 IST

ಲಂಡನ್: ರಜೆ ಅಸ್ವಾದಿಸಲಿಕ್ಕಾಗಿ ಬೀಚ್‌ಗೆ ತೆರಳಿದ್ದವರ ಮುಂದೆ ಭಾರೀ ಗಾತ್ರದ ತಿಮಿಗಿಂಲವೊಂದು ಚಡಪಡಿಸಿ ಸಾವನ್ನಪ್ಪಿದ ದೃಶ್ಯ ಕಾಣಲು ಸಿಕ್ಕಿದ ಘಟನೆ ಲಂಡನ್‌ನಿಂದ ವರದಿಯಾಗಿದೆ. 30,000 ಸಾವಿರ ಕಿಲೋ ತೂಕ ಮತ್ತು 45ಅಡಿ ಉದ್ದ ತಿಮಿಂಗವೊಂದು ಸಮುದ್ರ ಬದಿಯಲ್ಲಿದ್ದ ಬಂಡಕಲ್ಲಿಗೆ ಬಂದು ಅಪ್ಪಳಿಸಿತ್ತು. ತಟರಕ್ಷಣ ಸೇನೆ ಮತ್ತು ಮುಳುಗು ತಜ್ಞರು ಇದನ್ನು ರಕ್ಷಿಸಲು ಹರಸಾಹ ಮಾಡಿದರೂ ಯಶಸ್ವಿಯಾಗಿರಲಿಲ್ಲ.


 ನೋರ್‌ಫೋಲ್ಕ್‌ನ ಹನ್‌ಸ್ಟಂಟ್ ಬೀಚ್‌ನಲ್ಲಿ ಒಂದು ಗಂಟೆವರೆಗೆ ಚಡಪಡಿಸಿದ್ದ ಆ ತಿಮಿಂಗಿಲ ಕೊನೆ ಸತ್ತು ಹೋಯಿತು. ಇನ್ನೊಂದು ತಿಮಿಂಗಲವೂ ಅದರ ಜೊತೆಗಿತ್ತು, ಅದಕ್ಕೆ ಸಮುದ್ರದೊಳಕ್ಕೆ ಮರಳಿ ಹೋಗಲು ಸಾಧ್ಯವಾಗಿದೆ.
  
ಬಂಡೆಗೆ ಅಪ್ಪಳಿಸಿದ್ದರಿಂದ ಅದರ ತಲೆಯಿಂದ ಹರಿದಿದ್ದ ರಕ್ತ ಸಮುದ್ರವನ್ನು ಕೆಂಪನ್ನಾಗಿಸಿತು. ನೋಡುತ್ತ ನಿಂತವರಲ್ಲಿ ಈ ದೃಶ್ಯ ಆತಂಕಕ್ಕೂ ಕಾರಣವಾಯಿತು. ತಿಮಿಂಗಿಲವನ್ನು ರಕ್ಷಿಸಲು ಆಗಲಿಲ್ಲ ಎಂಬ ನಿರಾಶೆಯಿಂದ ಅವರು ನೋಡುತ್ತ ನಿಲ್ಲಬೇಕಾಯಿತು. ಹನ್‌ಸ್ಟನ್ ಲೈಫ್ ಬೋಟ್ ಉದ್ಯೋಗಿಗಳು ಮತ್ತು ಬ್ರಿಟಿಷ್ ಡೈವರ್ಸ್‌ ರಸ್ಕ್ಯೂ ಟೀಮ್ ನಡೆಸಿದ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಜನರನ್ನು ತಿಮಿಂಗಿಲ ಸತ್ತು ಬಿದ್ದ ಸ್ಥಳಕ್ಕೆ ಬರಲು ಅಧಿಕಾರಿಗಳು ಆಸ್ಪದ ನೀಡಿರಲಿಲ್ಲ. ಲಂಡನ್‌ನ ಜಿಯೋಲಜಿಕಲ್ ಸೊಸೈಟಿ ತಜ್ಞರು ಪರಿಶೀಲನೆಗಾಗಿ ಇದನ್ನು ರಕ್ಷಿಸಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News