×
Ad

ಪಾಕ್ ಭಯೋತ್ಪಾದಕ ಜಾಲವನ್ನು ಧ್ವಂಸಗೊಳಿಸಬೇಕು’

Update: 2016-01-24 23:45 IST

ವಾಶಿಂಗ್ಟನ್, ಜ. 24: ತನ್ನ ನೆಲದಲ್ಲಿರುವ ಭಯೋತ್ಪಾದಕ ಜಾಲಗಳನ್ನು ಪಾಕಿಸ್ತಾನ ನಿಷೇಧಿಸಬೇಕು ಹಾಗೂ ಧ್ವಂಸಗೊಳಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಭಾರತೀಯ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘‘ಪಾಕಿಸ್ತಾನ ತನ್ನ ನೆಲದಿಂದ ಕಾರ್ಯಾಚರಿಸುವ ಭಯೋತ್ಪಾದಕ ಗುಂಪುಗಳ ವಿರುದ್ಧ ಹೆಚ್ಚು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಹಾಗೂ ತೆಗೆದುಕೊಳ್ಳಬೇಕು’’ ಎಂದು ಹೇಳಿದರು.
 ಜನವರಿ 2ರಂದು ಪಠಾಣ್‌ಕೋಟ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್‌ರನ್ನು ಸಂಪರ್ಕಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕ್ರಮವನ್ನು ಅಮೆರಿಕದ ಅಧ್ಯಕ್ಷರು ಶ್ಲಾಘಿಸಿದರು.
ಪಠಾಣ್‌ಕೋಟ್ ದಾಳಿಯನ್ನು ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಸಂಘಟನೆ ಜೈಷೆ ಮುಹಮ್ಮದ್ ನಡೆಸಿದೆ ಎಂದು ಭಾರತ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News