×
Ad

ಹಡಗು ಮುಳುಗಿ 13 ಸಾವು

Update: 2016-01-24 23:47 IST

ಮನಾಗುವ (ನಿಕಾರಗುವ), ಜ. 24: ಕೆರಿಬಿಯನ್‌ನಲ್ಲಿರುವ ನಿಕಾರಗುವ ಲಿಟಲ್ ಕಾರ್ನ್ ದ್ವೀಪದ ಸಮೀಪ ಶನಿವಾರ ಸಣ್ಣ ಹಡಗೊಂದು ಮುಳುಗಿದಾಗ, 13 ಕೋಸ್ಟರಿಕ ನಿವಾಸಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಡಗಿನಲ್ಲಿ ಮಧ್ಯ ಅಮೆರಿಕ ಮತ್ತು ಅಮೆರಿಕದ 32 ಪ್ರವಾಸಿಗರು ಪ್ರಯಾಣಿಸುತ್ತಿದ್ದರು.ಇತರ ಪ್ರಯಾಣಿಕರು ಬದುಕುಳಿದಿದ್ದು, ಅವರನ್ನು ಸಮೀಪದ ಬಿಗ್ ಕಾರ್ನ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ನಿಕಾರಗುವ ಸರಕಾರದ ವಕ್ತಾರೆ ರೊಸಾರಿಯೊ ಮುರಿಲೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News