ಫುಟ್ಬಾಲ್ ಕ್ಲಬ್ ಟೂರ್ನಿ ಉದ್ಘಾಟನೆಗೆ ಕೇರಳಕ್ಕೆ ಆಗಮಿಸಿದ ರೊನಾಲ್ಡಿನೊ
ಕೊಝಿಕೋಡ್(ಕೇರಳ), ಜ.24: ಫುಟ್ಬಾಲ್ ಟೂರ್ನಿಯನ್ನು ಉದ್ಘಾಟಿಸಲು ಇದೇ ಮೊದಲ ಬಾರಿ ರವಿವಾರ ಕೇರಳಕ್ಕೆ ಭೇಟಿ ನೀಡಿರುವ ಬ್ರೆಝಿಲ್ ಸೂಪರ್ ಸ್ಟಾರ್ ರೊನಾಲ್ಡಿನೊಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಫೆ.5 ರಿಂದ ಆರಂಭವಾಗಲಿರುವ ಸೈತ್ ನಾಗ್‌ಜೀ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ್ನು ರೊನಾಲ್ಡಿನೊ ಮುಂಗಡವಾಗಿ ಉದ್ಘಾಟಿಸಿದರು. ಟ್ರೋಫಿಯನ್ನು ಟೂರ್ನಿಯ ಆಯೋಜಕರಿಗ ಹಸ್ತಾಂತರಿಸಿದ ರೊನಾಲ್ಡಿನೊ ಟೂರ್ನಿಗೆ ಚಾಲನೆ ನೀಡಿದರು. ಈ ವೇಳೆ ನೂರಾರು ಫುಟ್ಬಾಲ್ ಅಭಿಮಾನಿಗಳು ಆಗಮಿಸಿದ್ದರು.
ಟೂರ್ನಿಯು ಫೆ.5 ರಿಂದ 21ರ ತನಕ ನಡೆಯಲಿದೆ. ರೊನಾಲ್ಡಿನೊರಿಗೆ ಅನುಕೂಲವಾಗುವಂತೆ ಟೂರ್ನಿಯ ಉದ್ಘಾಟನೆಯನ್ನು ಮುಂಗಡವಾಗಿ ಮಾಡಲಾಗಿದೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ. ಬಾರ್ಸಿಲೋನದ ಮಾಜಿ ಆಟಗಾರ ರೊನಾಲ್ಡಿನೊ ನಾಗ್‌ಜೀ ಇಂಟರ್‌ನ್ಯಾಶನಲ್ ಫುಟ್ಬಾಲ್ ಕ್ಲಬ್ ಟೂರ್ನಿಯ ರಾಯಭಾರಿ ಆಗಿದ್ದಾರೆ.
ದಕ್ಷಿಣ ಅಮೆರಿಕ ಹಾಗೂ ಯುರೋಪ್‌ನ ಕ್ಲಬ್ ಆಟಗಾರರು ಇದೇ ಮೊದಲ ಬಾರಿ ಭಾರತದಲ್ಲಿ ನಡೆಯಲಿರುವ ಕ್ಲಬ್ ಟೂರ್ನಿಯಲ್ಲಿ ಆಡಲಿದ್ದಾರೆ.