ಅಂಧರ ಟ್ವೆಂಟಿ-20 ಏಷ್ಯಾಕಪ್: ಭಾರತಕ್ಕೆ ಪ್ರಶಸ್ತಿ
Update: 2016-01-24 23:55 IST
ಕೊಚ್ಚಿ, ಜ.24: ಬದ್ಧ ಎದುರಾಳಿ ಪಾಕಿಸ್ತಾನವನ್ನು 44 ರನ್‌ಗಳ ಅಂತರದಿಂದ ಮಣಿಸಿದ ಭಾರತದ ಅಂಧರ ಕ್ರಿಕೆಟ್ ತಂಡ ಟ್ವೆಂಟಿ-20 ಏಷ್ಯಾಕಪ್‌ನ್ನು ಗೆದ್ದುಕೊಂಡಿದೆ.
ರವಿವಾರ ಇಲ್ಲಿನ ನೆಹರೂ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಪಾಕಿಸ್ತಾನ 164 ರನ್‌ಗೆ ಆಲೌಟಾಯಿತು. ಭಾರತ ಇದೇ ಮೊದಲ ಬಾರಿ ಅಂಧರ ಟ್ವೆಂಟಿ-20 ಏಷ್ಯಾಕಪ್‌ನ್ನು ಮುಡಿಗೇರಿಸಿಕೊಂಡಿದೆ