×
Ad

ಬಿಹಾರ ಜೆಡಿಯು ಶಾಸಕ ಆಲಂ ಬಂಧನ

Update: 2016-01-24 23:59 IST

ಪಾಟ್ನಾ,ಜ.24: ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ದಿಲ್ಲಿ ಮೂಲದ ದಂಪತಿಯ ಜೊತೆ ಅಸಭ್ಯವಾಗಿ ವರ್ತಿಸಿದ ಹಾಗೂ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ಬಿಹಾರದ ಜೆಡಿಯು ಶಾಸಕ ಸರ್ಫಾಝ್ ಆಲಂರನ್ನು ರವಿವಾರ ಪಾಟ್ನಾದಲ್ಲಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ದಿಬ್ರೂಘರ್-ಹೊಸದಿಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಜನವರಿ 17ರಂದು ಈ ಘಟನೆ ನಡೆದಿತ್ತು. ಬಂಧನದ ಬಳಿಕ ಆಲಂರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಅವರಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದಾರೆ.
ರಾಜಧಾನಿ ಎಕ್ಸ್‌ಪ್ರೆಸ್ ಘಟನೆಯ ಬಳಿಕ ಜೆಡಿಯು ಆಲಂ ಅವರನ್ನು ಅಮಾನತುಗೊಳಿಸಿತ್ತು. ಅರಾರಿಯಾ ಜಿಲ್ಲೆಯ ಜೊಕಿಹಾಟ್ ಕ್ಷೇತ್ರದ ಶಾಸಕರಾದ ಆಲಂ, ಸತತ ಮೂರನೆ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News