ಬೀಫ್ ತಿನ್ನುವುದನ್ನು ಮುಂದುವರಿಸಬೇಕಾದರೆ ನಮ್ಮ ಪಕ್ಷಕ್ಕೆ ಮತ ಹಾಕಿ : ಅಸದುದ್ದೀನ್ ಉವೈಸಿ

Update: 2016-01-25 14:35 GMT

ಹೈದರಾಬಾದ್ : ನೀವು ಬೀಫ್ ತಿನ್ನುವುದನ್ನು ಮುಂದುವರಿಸಬೇಕಾದರೆ ನಮ್ಮ ಎಐಎಂಐಎಂ ಪಕ್ಷಕ್ಕೆ ಮತ ಹಾಕಿ ಎಂದು ಗ್ರೇಟರ್ ಹೈದರಾಬಾದ್ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಸಂಸದ ಹಾಗು ಎಐಎಂಐಎಂ ಮುಖ್ಯಸ್ಥ  ಅಸದುದ್ದೀನ್ ಉವೈಸಿ ಸೋಮವಾರ ಹೇಳಿದ್ದಾರೆ.  ಒಂದು ವೇಳೆ ನಮ್ಮ ಪಕ್ಷ ಈ ಚುನಾವಣೆಯಲ್ಲಿ ಸೋತರೆ ಅಲ್ಪ ಸಂಖ್ಯಾತರು ಬೀಫ್ ತಿನ್ನುವುದನ್ನೇ ಮರೆತುಬಿಡಬೇಕಾಗುತ್ತದೆ ಎಂದು ಅವರು ಎಚ್ಚರಿಸುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. 

ಮಹಾರಾಷ್ಟ್ರದಲ್ಲಿ ಬೀಫ್ ನಿಷೇಧಿಸುವ ಮೂಲಕ ಅಲ್ಲಿನ ಬಿಜೆಪಿ ನೇತೃತ್ವದ ಸರಕಾರ ಮುಸ್ಲಿಮರು ಹಾಗು ದಲಿತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿರುವ ಅವರು ಪ್ರಧಾನಿ ಮೋದಿ ಅವರು ಇಲ್ಲಿ ಬೀಫ್ ನಿಷೆಧಿಸುತ್ತಾರೆ , ಅಲ್ಲಿ ದೇಶದಿಂದ ರಫ್ತಾಗುವ ಬೀಫ್ ಪ್ರಮಾಣ ಹೆಚ್ಚಾಗುತ್ತಲೇ ಇದೆ. ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಮೋದಿ ಅಧಿಕಾರಕ್ಕೆ ಬಂಡ ಮೇಲೆ ಬೀಫ್ ರಫ್ತಿನಲ್ಲಿ ೧೭% ಹೆಚ್ಚಳವಾಗಿದೆ. ಮೋದಿ ಅವರು ಏನು ಮಾಡುತ್ತಿದ್ದಾರೆ ? ಎಂದು ಉವೈಸಿ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News