×
Ad

"ನಾನು ಭಾರತ ಬಿಟ್ಟು ಹೋಗಲಾರೆ... ಹುಟ್ಟಿದ್ದು ಇಲ್ಲಿ .. ಸಾಯುವುದು ಇಲ್ಲೇ" : ಆಮಿರ‍್ ಖಾನ್

Update: 2016-01-25 23:14 IST

ಮುಂಬೈ, ಜ.25: ಅಸಹಿಷ್ಣುತೆ' ಕುರಿತ ಹೇಳಿಕೆ ನೀಡಿ ವಿವಾದವನ್ನುಂಟು ಮಾಡಿದ್ದ ಬಾಲಿವುಡ್‌ ನಟ ಆಮಿರ್‌ ಖಾನ್‌ ಇದೀಗ ತಡವಾಗಿ ತಾನು ಭಾರತ ಬಿಟ್ಟು ಹೋಗಲಾರೆ, ಹುಟ್ಟಿದ್ದು ಇಲ್ಲಿ , ಸಾಯುವುದು ಇಲ್ಲಿಯೇ ಎಂದು ಹೇಳಿದ್ದಾರೆ.
ಇಂದು ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದ ಆಮಿರ್‌ ಖಾನ್‌ ದೇಶ ಬಿಟ್ಟು ಹೋಗುವ ಎಂದು ಯೋಚನೆ ಮಾಡಿದರೆ , ದೇಶ ಬಿಟ್ಟು ಹೋಗುತ್ತೇವೆ ಎಂದು ಅರ್ಥವಲ್ಲ ಎಂದು ಹೇಳಿದ್ಧಾರೆ.
  ಅಸಹಿಷ್ಣುತೆ ಬಗ್ಗೆ ಮಾತನಾಡಿ ವಿವಾದವನ್ನುಂಟು ಮಾಡಿದ್ದ ಆಮಿರ‍್ ಖಾನ್‌ ಇದೀಗ ಅಕ್ಷಯ್ ಕುಮಾರ್‌ ಹೇಳಿಕೆ  ನೀಡಿದ್ದ ಬೆನ್ನಲ್ಲೆ ಈ ರೀತಿ ಹೇಳಿಕೆ ನೀಡಿದ್ದಾರೆ. "ಭಾರತದಲ್ಲಿ ಅಸಹಿಷ್ಣುತೆ  ಇದೇ ಅಥವಾ ದೇಶ ಬಿಟ್ಟು ಹೋಗುತ್ತೇನೆ ಎಂದು ನಾನು ಹೇಳಿಕೆ ನೀಡಿಲ್ಲ. ಯಾರಿಗೆ ನೋವಾಗಿದೆಯೊ ಅದನ್ನು ಅರ್ಥ ಮಾಡಿಕೊಂಡಿರುವುದಾಗಿ ನಾನು ಹೇಳಿದ್ದೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಇದಕ್ಕೆ ಕೆಲವು ಮಾಧ್ಯಮಗಳು ಕಾರಣವಾಗಿದೆ. ನಾನು ಇಲ್ಲಿ ಹುಟ್ಟಿದ್ದೇನೆ. ಇಲ್ಲೆ ಸಾಯುವೆನು " .ಎಂದರು.
ತನ್ನ ಸೂಪರ‍್  ಹಿಟ್‌ ಚಿತ್ರ ರಂಗ್ ದೇ ಬಸಂತಿ  ಹತ್ತು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಆನೇಕ ಭಾಷೆಗಳಿವೆ. ವಿಭಿನ್ನ ಸಂಸ್ಕೃತಿಯನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ ಎಂದು  ಅಭಿಪ್ರಾಯಪಟ್ಟರು.
  "ಒಂದು ವೇಳೆ ವಿದೇಶಕ್ಕೆ ಅಗತ್ಯದ ಕಾರ್ಯಗಳಿಗೆ ಹೋದರೂ, ಎರಡು ವಾರಕ್ಕಿಂತ ಹೆಚ್ಚು ದಿನ ಅಲ್ಲಿ ಇರಲಾರೆ " ಎಂದು ಆಮಿರ್‌ ಖಾನ್‌ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News