ಖಲೀದಾ ಜಿಯಾ ವಿರುದ್ಧ ದೇಶದ್ರೋಹದ ದೂರು
Update: 2016-01-25 23:48 IST
ಢಾಕಾ, ಜ. 25: 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಬಾಂಗ್ಲಾ ವಿಮೋಚನೆ ಯುದ್ಧದ ಹುತಾತ್ಮರ ಬಗ್ಗೆ ನೀಡಿದ್ದಾರೆನ್ನಲಾದ ‘‘ಮಾನಹಾನಿಕರ ಹೇಳಿಕೆ’’ಗಳಿಗಾಗಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಪ್ರತಿಪಕ್ಷ ನಾಯಕಿ ಖಲೀದಾ ಝಿಯಾ ವಿರುದ್ಧ ಇಂದು ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.
ಕಳೆದ ವರ್ಷದ ಡಿಸೆಂಬರ್ 21ರಂದು ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ 70 ವರ್ಷದ ಝಿಯಾ, 1971ರ ವಿಮೋಚನಾ ಯುದ್ಧದ ಸಾವಿನ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆ ಯುದ್ಧದಲ್ಲಿ ಎಷ್ಟು ಜನ ಹುತಾತ್ಮರಾಗಿದ್ದಾರೆ ಎಂಬ ಬಗ್ಗೆ ವಿವಾದಗಳಿವೆ ಎಂದಿದ್ದರು.
ಖಲೀದಾ ಝಿಯಾರ ಪಕ್ಷ ಬಿಎನ್‌ಪಿ, ಜಮಾಅತೆ ಇಸ್ಲಾಮಿಯ ಪ್ರಮುಖ ಭಾಗೀದಾರ ಪಕ್ಷವಾಗಿದೆ. ಪಾಕಿಸ್ತಾನದಿಂದ ಬಾಂಗ್ಲಾದೇಶ ಸ್ವತಂತ್ರಗೊಂಡಿರುವುದನ್ನು ಜಮಾಅತೆ ಇಸ್ಲಾಮಿ ವಿರೋಧಿಸುತ್ತದೆ.