ಕೇರಳಕ್ಕೆ ಗಾಂಜಾ ಸರಬರಾಜು : ಯುವಕರ ಬಂಧನ
Update: 2016-01-26 12:48 IST
ಕುಟ್ಯಾಡಿ: ಆರು ಕಿಲೋ ಗಾಂಜಾದೊಂದಿಗೆ ಯವಕರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ರಾಜ್ಯದ ಮೂಲಕ ಒರಿಸ್ಸಾದಿಂದ ಇವರು ಗಾಂಜಾವನ್ನುಇಲ್ಲಿಗೆ ಸಪ್ಲೈ ಮಾಡುತ್ತಿದ್ದರು ಎಂದು ತೊಟ್ಟಿಲ್ ಪಾಲಂ ಎಸ್ಸೈ ಜಿಜೇಷ್ ತಿಳಿಸಿದ್ದಾರೆ.
ಗಾಂಜಾವನ್ನು ಇವರು ಮಧ್ಯವರ್ತಿಗಳಿಗೆ ಹಸ್ತಾಂತರಿಸುತ್ತಿರುವಾಗಲೇ ಪೊಲೀಸರ ತಂಡ ಇವರನ್ನು ಹಿಡಿದಿದೆ. ತೊಟ್ಟಿಲ್ ಪಾಲಂ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುವುದು ಗಾಂಜಕೋರರ ಉದ್ದೇಶವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.