×
Ad

ಲಂಡನ್‌ನಲ್ಲೊಬ್ಬ ಕ್ಯಾನ್ಸರ್, ಏಡ್ಸ್‌ಗಳಿಗೆ ನಕಲಿ ಮದ್ದು ವಿತರಿಸುತ್ತಿರುವ ಆರ್ಚ್ ಬಿಷಪ್‌

Update: 2016-01-26 12:55 IST

ಲಂಡನ್: ಇಲ್ಲಿನ ಸ್ವಯಂಘೋಷಿತ ಬಿಷಪ್ ಒಬ್ಬರು ಕ್ಯಾನ್ಸರ್ ಮತ್ತು ಏಡ್ಸ್ ಶಮನ ತೈಲ ಮಾರಾಟ ಮಾಡಿ ಕುಖ್ಯಾತಿಗೀಡಾಗಿದ್ದಾರೆ. ದೇವನಿಂದ ವಿಶೇಷ ಅನುಗ್ರಹೀತ ತೈಲ ಇದೆಂದು ಪ್ರಚಾರ ನಡೆಸಿ ರೋಗಿಗಳನ್ನು ವಂಚಿಸಿದ್ದಾರೆ ಎಂಬುದನ್ನು ಪತ್ರಿಕೆಗಳು ಬಹಿರಂಗೊಳಿಸಿವೆ.

ಅರ್ಚ್ ಬಿಷಪ್ ಗಿಲ್ಬರ್ಟ್ ಡೆ ಸೌತ್ ಲಂಡನ್‌ನ ತನ್ನ ಚರ್ಚ್‌ನ ಅಂಗಡಿಯಲ್ಲಿ ಸಂಗಡಿಗರೊಂದಿಗೆ ಮಾರುತ್ತಿರುವ ತೈಲವು ಆಲ್ಡಿಯಾದಿಂದ ಖರೀದಿಸಿ ತಂದಿರುವ ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್ ಆಗಿದೆ ಎಂದು ಪತ್ರಿಕೆಗಳು ಬಹಿರಂಗ ಪಡಿಸಿವೆ.

ವೈದಿಕರು ಭಕ್ತ ಜನರ ಶೋಷಣೆಗೆ ವಿವಿಧ ಪೋಷಾಕು ಧರಿಸುವುದು ಇಂದು ವಿಶೇಷ ಸಂಗತಿಯಲ್ಲ. ತಾನು ಪೆಕಾಮ್ ಎಂಬಲ್ಲಿ ಆರ್ಚ್ ಬಿಷಪ್ ಆಗಿದ್ದೇನೆಂದು ಗಿಲ್ಬರ್ಟ್ ಸ್ವಯಂ ಘೋಷಿಸಿಕೊಳ್ಳುವ ಮೂಲಜ ಅವರು ಈಮೊದಲು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದರು.

ಕೇವಲ 1.99 ಪೌಂಡ್‌ನ ಈ ತೈಲಕ್ಕೆ ದೈವಿಕತೆಯನ್ನು ಆರೋಪಿಸಿ ಗಿಲ್ಬರ್ಟ್ ಮತ್ತು ಸಂಗಡಿಗರು 4.99 ಪೌಂಡ್‌ಗೆ ಮಾರಾಟ ಮಾಡಿ ಭಕ್ತರನ್ನು ವಂಚಿಸುತ್ತಿದ್ದರೆನ್ನಲಾಗಿದೆ. ಕ್ಯಾನ್ಸರ್ ಮತ್ತು ಏಡ್ಸ್ ರೋಗ ಶಮನದ ಶಕ್ತಿಯನ್ನು ದೇವನು ಇದಕ್ಕೆ ಪ್ರದಾನಿಸಿದ್ದಾನೆಂದು ಆರೋಪಿತ ಆರ್ಚ್ ಬಿಷಪ್ ವಾದಿಸುತ್ತಿದ್ದಾರೆ. ಈ ತೈಲದ ವಿಶೇಷತೆಯನ್ನು ಬರೆದ ನೋಟಿಸ್‌ನ್ನು ಇವರ ತಂಡ ವಿತರಿಸುತ್ತಿತ್ತು. ಈ ಕುರಿತು ಗಿಲ್ಬರ್ಟ್‌ಮತ್ತು ಫಾಸ್ಟರ್ ಮೇಲೆ ಆರೋಪ ದಾಖಲಿಸಲಾಗಿದೆ.

ಫಿಲಿಪ್ ರಾಜಕುಮಾರ, ರಾಣಿ ಎಲಿಝಬೆತ್‌ರೊಂದಿಗೆ ಭೇಟಿಯಾಗಿದ್ದೇನೆಂಬ ಫೋಟೊಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಗಿಲ್ಬರ್ಟ್ ಹಾಕಿದ್ದರು. ಬಂಜೆತನ ಅನುಭವಿಸುವ ದಂಪತಿಗಳಿಗೆ ಮಕ್ಕಳನ್ನು ಕರುಣಿಸಲು ತನಗೆ ಸಾಧ್ಯವಿದೆ ಎಂದು ಈ ಆರ್ಚ್‌ಬಿಷಪ್ ಹೇಳಿಕೊಂಡಿದ್ದರು.

ಆದರೆ ಈಗ ಇದನ್ನು ನಿರಾಕರಿಸುತ್ತಿದ್ದಾರೆ. ಗಿಲ್ಬರ್ಟ್ ಸ್ವದೇಶವಾದ ಕೆನ್ಯಕ್ಕೆ ತನ್ನನ್ನು ಗಡಿಪಾರು ಮಾಡವುದರ ವಿರುದ್ಧ ಹತ್ತು ವರ್ಷ ಕಾನೂನು ಹೋರಾಟ ನಡೆಸಿದ್ದರು. ತನ್ನನ್ನು ಕೆನ್ಯಕ್ಕೆ ಗಡಿಪಾರು ಮಾಡಿದರೆ ಹಿಂಸೆ ಮತ್ತು ಅಮಾನವೀಯ ಅನುಭವವಗಳನ್ನು ಅನುಭವಿಸಬೇಕಾಗಬಹುದೆಂದು 2007ರಲ್ಲಿ ಅವರು ಹೇಳಿಕೊಂಡಿದ್ದರು.

 ಈ ಮೊದಲು ನೈರೋಬಿಯದ ಮೈನಾರಿಟಿ ಆಸ್ಪತ್ರೆಯಿಂದ ಐದು ಶಿಸುಗಳನ್ನು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ 2006ರಲ್ಲಿ ಇವರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News