×
Ad

ಲೈಂಗಿಕ ಕಿರುಕುಳ ಆರೋಪ : ಖ್ಯಾತ ಯೋಗ ಗುರು ಬಿಕ್ರಂ ಚೌಧುರಿಗೆ 9 ಲಕ್ಷ ಡಾಲರ್ ದಂಡ

Update: 2016-01-26 16:21 IST

ಅಮೇರಿಕಾದಲ್ಲಿ ಬಿಕ್ರಂ ಯೋಗ ಸಂಸ್ಥೆಯ ಸ್ಥಾಪಕ ಬಿಕ್ರಂ ಚೌಧುರಿ ಎಂಬ ಖ್ಯಾತ ಯೋಗ ಗುರು ಅಲ್ಲಿನ ನ್ಯಾಯಾಲಯ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ 9,24,500 ಡಾಲರ್ ದಂಡ ಪಾವತಿಸುವಂತೆ ಆದೇಶ ನೀಡಿದೆ. ಬಿಕ್ರಂ ವಿರುದ್ಧದ ಲೈಂಗಿಕ ಕಿರುಕುಳ ಪ್ರಕಾರವನ್ನು ತನಿಖೆ ಮಾಡಿದ್ದಕ್ಕೆ ತನ್ನನ್ನು ಸೇವೆಯಿಂದ ವಜಾ ಮಾಡಲಾಗಿತ್ತು ಎಂದು ಆತನ ಮಾಜಿ ಕಾನೂನು ಸಲಹೆಗಾರ್ತಿ ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿತ್ತು. ಈ ದಂಡದ ಮೊತ್ತವನ್ನು ಆಕೆಗೆ ನೀಡಲಾಗುತ್ತದೆ. 

ಬಿಕ್ರಂ ಚೌಧುರಿಯ ವಿರುದ್ಧ ಆತನ ಮಾಜಿ ಆಪ್ತ ಸಲಹೆಗಾರ್ತಿ ಮಿನಾಕ್ಷಿ  ಜಫ಼ ಬೋಡೆನ್ ಎಂಬಾಕೆ ಅನ್ಯಾಯ, ಸೇಡು , ಅಕ್ರಮ ವಜಾ ಹಾಗು ಲೈಂಗಿಕ ಕಿರುಕುಳ ಎಸಗಿದ ಆರೋಪ ಮಾಡಿದ್ದು ಅವುಗಳು ಸಾಬೀತಾದ ಮೇಲೆ ಆಕೆಗೆ ಈ ಪರಿಹಾರ ಪಾವತಿಸುವಂತೆ  ಲಾಸ್ ಎಂಜಲೀಸ್ ನ ನ್ಯಾಯಾಲಯವೊಂದು ಆದೇಶ ನೀಡಿದೆ. 

ಬಿಕ್ರಂ ಚೌಧುರಿ ಅನ್ಯಾಯವೆಸಗಿದ್ದಾರೆ ಹಾಗು ವಂಚನೆ ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ಕಂಡು ಬಂದಿದ್ದು ಅವರು ಪರಿಹಾರ ನೀಡಬೇಕು ಅಂದು ನ್ಯಾಯಾಲಯ ಹೇಳಿದೆ. 2011 ರಲ್ಲಿ ತನ್ನ ಸಲಹೆಗಾರ್ತಿಯಾಗಿ ಅಮೆರಿಕಕ್ಕೆ ಬಾ ಎಂದು ನನ್ನನ್ನು ಭಾರತದಿಂದ ಕರೆಸಿದ ಚೌಧುರಿ ತನ್ನ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಹಾಗು ತನ್ನ ವಿರುದ್ಧ ಅಶ್ಲೀಲ ಮಾತುಗಳನ್ನು ಹೇಳುತ್ತಿದ್ದ. ಅದಲ್ಲದೆ ತನ್ನ ಒಬ್ಬ ವಿದ್ಯಾರ್ಥಿನಿಯ ಮೇಲೂ ಈತ ಅತ್ಯಾಚಾರ ಎಸಗಿದ್ದಾನೆ ಎಂದು ಮೀನಾಕ್ಷಿ ದೂರಿದ್ದರು. ಈ ಆರೋಪಗಳು ಸುಳ್ಳು ಎಂದು ಬಿಕ್ರಂ ವಾದಿಸಿದ್ದರು. 

ಆದ್ರೆ ಈಗ ಬಿಕ್ರಂ ವಿರುದ್ಧದ ಆರೋಪಗಳು ಸಾಬೀತಾಗಿವೆ . ಈತನ  ವಿರುದ್ಧ ಇತ್ತೀಚಿಗೆ ಇತರ 6 ಮಹಿಳೆಯರೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News