ಗಣರಾಜ್ಯೋತ್ಸವ ಪರೇಡ್‌ನಲ್ಲಿ 23 ಸ್ತಬ್ಧಚಿತ್ರಗಳು ಭಾಗಿ
Update: 2016-01-26 20:53 IST
ಹೊಸದಿಲ್ಲಿ,ಜ.26: ಮಂಗಳವಾರ ಇಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಗಿರ್ ಸಿಂಹಧಾಮ,ಮಧ್ಯಪ್ರದೇಶದ ವೈಟ್ ಟೈಗರ್ ಸಫಾರಿ,ಬಿ.ಆರ್.ಅಂಬೇಡ್ಕರ್ ಅವರ ಕಾರ್ಯಗಳು ಹಾಗೂ ಸ್ವಚ್ಛ ಭಾರತ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳನ್ನು ಆಧರಿಸಿದ ಸ್ತಬ್ಧಚಿತ್ರಗಳು ಸೇರಿದಂತೆ ಒಟ್ಟೂ 23 ಸ್ತಬ್ಧಚಿತ್ರಗಳು ಭಾಗವಹಿಸಿದ್ದು, ಈ ಪೈಕಿ 17 ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದವು. ಕೇಂದ್ರದ ಆರು ವಿವಿಧ ಸಚಿವಾಲಯಗಳ ಸ್ತಬ್ಧಚಿತ್ರಗಳೂ ಭಾಗಿಯಾಗಿದ್ದವು.
ಕರ್ನಾಟಕ,ಬಿಹಾರ,ಅಸ್ಸಾಂ,ಗೋವಾ,ಸಿಕ್ಕಿಂ,ರಾಜಸ್ಥಾನ,ಚಂಡಿಗಡ,ತ್ರಿಪುರಾ,ಒಡಿಶಾ,
ಪ.ಬಂಗಾಳ,ಮಧ್ಯಪ್ರದೇಶ,ಛತ್ತೀಸ್‌ಗಡ,ತಮಿಳುನಾಡು,ಉತ್ತರಾಖಂಡ್,ಜಮ್ಮು-ಕಾಶ್ಮೀರ ಉತ್ತರ ಪ್ರದೇಶ ಮತ್ತು ಗುಜರಾತಗಳ ಸ್ತಬ್ಧಚಿತ್ರಗಳು ತಮ್ಮ ಹಾಜರಾತಿಯನ್ನು ದಾಖಲಿಸಿದರೆ,ರಾಷ್ಟ್ರ ರಾಜಧಾನಿ ದಿಲ್ಲಿ ಸತತ ಮೂರನೇ ವರ್ಷವೂ ಸ್ತಬ್ಧಚಿತ್ರವನ್ನು ಕಳುಹಿಸಿರಲಿಲ್ಲ.