ಹೊಲ್ಲಾಂಡೆಗೆ ವಿದಾಯ ಕೋರಿದ ಮೋದಿ
Update: 2016-01-26 20:56 IST
ಹೊಸದಿಲ್ಲಿ,ಜ.26: ತನ್ನ ಮೂರು ದಿನಗಳ ಭೇಟಿಯ ಬಳಿಕ ಮಂಗಳವಾರ ಭಾರತದಿಂದ ನಿರ್ಗಮಿಸಿದ ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡೆಯವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಹೃದಯಸ್ಪರ್ಶಿ ವಿದಾಯವನ್ನು ಕೋರಿದ್ದಾರೆ. ಇದೇ ವೇಳೆ ತಮ್ಮ ನಡುವಿನ ಮಾತುಕತೆಗಳು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಹೊಲ್ಲಾಂಡೆ,ಭಾರತಕ್ಕೆ ಭೇಟಿ ನೀಡಿದ್ದಕ್ಕೆ ಮತ್ತು ನಮ್ಮ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿದ್ದಕ್ಕೆ ನಿಮಗೆ ಕೃತಜ್ಞತೆಗಳು ಎಂದು ಟ್ವೀಟಿಸಿರುವ ಪ್ರಧಾನಿ, ಫ್ರಾನ್ಸ್‌ನೊಂದಿಗಿನ ಭಾರತದ ಸ್ನೇಹ ವಿಶೇಷವಾಗಿದೆ. ಅಧ್ಯಕ್ಷ ಹೊಲ್ಲಾಂಡೆಯವರ ಭೇಟಿ ಸಂದರ್ಭದಲ್ಲಿನ ಮಾತುಕತೆಗಳು ನಮ್ಮ ಸಂಬಂಧಗಳನ್ನು ಇನ್ನಷ್ಟು ಗಾಢಗೊಳಿಸುವ ವಿಶ್ವಾಸವಿದೆ ಎಂದು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಫ್ರೆಂಚ್ ಭಾಷೆಯಲ್ಲಿಯೂ ಹೊಲ್ಲಾಂಡೆಯವರಿಗೆ ವಿದಾಯವನ್ನು ಕೋರಿ ಅವರು ಟ್ವೀಟಿಸಿದ್ದಾರೆ.