×
Ad

ರೆಂಕೋಜಿಯಲ್ಲಿಯ ಚಿತಾಭಸ್ಮದ ಡಿಎನ್‌ಎ ಪರೀಕ್ಷೆಗೆ ನೇತಾಜಿ ಪುತ್ರಿ ಒಲವು

Update: 2016-01-26 21:01 IST

ಹೊಸದಿಲ್ಲಿ,ಜ.26: ಜಪಾನಿನ ಟೋಕಿಯೋ ನಗರದ ರೆಂಕೋಜಿಯ ಬೌದ್ಧಮಂದಿರದಲ್ಲಿ ಕಲಶವೊಂದರಲ್ಲಿರುವ ಚಿತಾಭಸ್ಮವು ತನ್ನ ತಂದೆಯದು ಹೌದೇ ಎನ್ನುವುದನ್ನು ಖಚಿತಪಪಡಿಸಿಕೊಳ್ಳಲು ಡಿಎನ್‌ಎ ಪರೀಕ್ಷೆ ನಡೆಯಬೇಕೆಂದು ನೇತಾಜಿ ಸುಭಾಸ ಚಂದ್ರ ಬೋಸ್ ಅವರ ಪುತ್ರಿ ಡಾ.ಅನಿತಾ ಬೋಸ್ ಫಾಫ್ ಬಯಸಿದ್ದಾರೆ. ಇದೇ ವೇಳೆ ತೈಪೆಯಲ್ಲಿನ 1945ರ ವಿಮಾನ ಅಪಘಾತ ತನ್ನ ತಂದೆಯ ಸಾವಿಗೆ ಅತ್ಯಂತ ಸಂಭವನೀಯ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಜರ್ಮನಿಯ ಸ್ಟಾಟ್‌ಬೆರ್ಗನ್‌ನ ತನ್ನ ನಿವಾಸದಿಂದ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅನಿತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
 ಅರ್ಥಶಾಸ್ತ್ರಜ್ಞೆಯಾಗಿರುವ ಅನಿತಾ(73) ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ರೆಂಕೋಜಿ ಬೌದ್ಧಮಂದಿರದಲ್ಲಿರುವ ಅವಶೇಷಗಳ ಡಿಎನ್‌ಎ ಪರೀಕ್ಷೆಯನ್ನು ನಡೆಸುವ ಬಗ್ಗೆ ಇಲ್ಲಿಯ ಸರಕಾರವನ್ನು ಆಗ್ರಹಿಸಬಹುದು ಎಂದು ಬೋಸ್ ಕುಟುಂಬ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News