×
Ad

ಮಹಿಳೆಯರ ಟ್ವೆಂಟಿ-20: ಆಸೀಸ್‌ಗೆ ಸೋಲುಣಿಸಿದ ಭಾರತ

Update: 2016-01-26 23:20 IST

ಅಡಿಲೇಡ್, ಜ.26: ಭಾರತ ಮಹಿಳಾ ಕ್ರಿಕೆಟ್ ತಂಡ ಆತಿಥೇಯ ಆಸ್ಟ್ರೇಲಿಯ ವನ್ನು ಮೊದಲ ಟ್ವೆಂಟಿ-20 ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಮಣಿಸಿ ಪುರುಷರಿಗಿಂತ ತಾವೇನೂ ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದೆ.

ಮಂಗಳವಾರ ಅಡಿಲೇಡ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತು.

 ಗೆಲ್ಲಲು ಸುಲಭ ಸವಾಲು ಪಡೆದ ಭಾರತ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಹರ್ಮನ್ ಪ್ರೀತ್ ಕೌರ್(46 ರನ್, 31 ಎಸೆತ, 6 ಬೌಂಡರಿ, 1 ಸಿಕ್ಸರ್)ವೇದಾ ಕೃಷ್ಣ ಮೂರ್ತಿ(35) ಹಾಗೂ ಸ್ಮತಿ ಮಂದಾನಾ(29) ಗೆಲುವಿನ ಕೊಡುಗೆ ನೀಡಿದರು.

ಮಂದಾನ ಹಾಗೂ ವೇದಾ 2ನೆ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಅನುಜಾ ಪಾಟೀಲ್(14) ಹಾಗೂ ಶಿಖಾ ಪಾಂಡೆ(4) 8 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಆರಂಭಿಕ ಆಟಗಾರ್ತಿ ಬಿಎಲ್ ಮೂನಿ(36) ಹಾಗೂ ಬ್ಲಾಕ್‌ವೆಲ್(ಔಟಾಗದೆ 27) ಹೋರಾಟದ ಹೊರತಾಗಿಯೂ 140 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಪೂನಮ್ ಯಾದವ್(2-26) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News