ಭೈರಪ್ಪರಿಗೆ ಅವಮಾನ
ಎಸ್. ಎಲ್. ಭೈರಪ್ಪರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವ ಮೂಲಕ ಅವರನ್ನು ಅವಮಾನಿಸಲಾಗಿದೆ ಎಂದು ನಾನು ಭಾವಿಸಿದ್ದೇನೆ. ಅವರ ರಾಜಕೀಯ ನಿಲುವುಗಳು, ವಿವಾದಗಳು ಅದೇನೇ ಇರಲಿ.ಆದರೆ ಅವರ ಸಾಹಿತ್ಯಕ ಕೊಡುಗೆಗಳನ್ನು ನಾವು ಅಲ್ಲಗಳೆಯುವ ಹಾಗಿಲ್ಲ.ಗೃಹಭಂಗ, ಪರ್ವ, ದಾಟು, ತಂತು, ಮತದಾನ, ಧರ್ಮಶ್ರೀ, ತಬ್ಬಲಿಯು ನೀನಾದೆ ಮಗನೆ, ವಂಶವೃಕ್ಷ....ಇವರು ಬರೆದಿರುವ ಕಾದಂಬರಿಗಳ ಸಂಖ್ಯೆ ಬಹುದೊಡ್ಡದು.ಅಲ್ಲದೆ ಇವರು ಕೇವಲ ಕನ್ನಡಕ್ಕಷ್ಟೇ ಸೀಮಿತವಾಗಿರುವವರಲ್ಲ.ಮಹಾರಾಷ್ಟ್ರದಲ್ಲೂ ಇವರ ಅಭಿಮಾನಿಗಳ ದೊಡ್ಡ ತಂಡವೇ ಇದೆ. ಭಾರತೀಯ ಸಾಹಿತ್ಯದಲ್ಲಿ ಇವರ ಕಾಣಿಕೆ ಬಹುದೊಡ್ಡದು.ಎಲ್ಲರೂ ಪಾಶ್ಚಿಮಾತ್ಯ ಆಲೋಚನೆಗಳಿಂದ ಪ್ರಭಾವಿತರಾಗಿ ಬರೆಯುವಾಗ, ಅದುವೇ ಶ್ರೇಷ್ಠ ಎಂಬ ಮೇಲರಿಮೆ ಇದ್ದಾಗ, ಭಾರತೀಯ ತತ್ವಶಾಸ್ತ್ರವನ್ನು ಆಧರಿಸಿಕೊಂಡು ಕಾದಂಬರಿಗಳನ್ನು ಬರೆದವರು ಭೈರಪ್ಪ. ಇಂತಹ ಭೈರಪ್ಪರಿಗೆ ಪದ್ಮವಿಭೂಷಣ ಅಥವಾ ಪದ್ಮಭೂಷಣ ಪ್ರಶಸ್ತಿಯನ್ನಾದರೂ ಕೊಡಬೇಕಾಗಿತ್ತು
ಈ ಹಿಂದೆ ಭೈರಪ್ಪರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗಿತ್ತು.ಆದರೆ ಅದೇ ಪ್ರಶಸ್ತಿಯನ್ನು ವೀರಪ್ಪ ಮೊಯ್ಲಿಯವರಿಗೆ ಕೊಟ್ಟು ಭೈರಪ್ಪರನ್ನು ಅವಮಾನಿಸಲಾಯಿತು.ಇದೀಗ ಪದ್ಮವಿಭೂಷಣಕ್ಕೆ ಅರ್ಹರಾಗಿರುವ ಭೈರಪ್ಪರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಮೂಲಕ, ಕನ್ನಡ ಭಾಷೆಯ ಕುರಿತಂತೆ ಹಿಂದಿ ಭಾಷಿಗರು ತಳೆದಿರುವ ಅಸಹನೆ ವ್ಯಕ್ತವಾಗಿದೆ.
-ಅನಂತಭಟ್,
ಸುಳ್ಯ