ಈಗ ಚುನಾವಣೆ ನಡೆದರೂ ಮೋದಿಯೇ ಪ್ರಧಾನಿ: ಸಮೀಕ್ಷೆ
ಹೊಸದಿಲ್ಲಿ: ಸರಾಸರಿಯಲ್ಲಿ ಮೇಲಿರುವ ಪ್ರಧಾನಿಯಾಗಿ ನರೇಂದ್ರ ಮೋದಿಯನ್ನು ಭಾರತೀಯರು ಪರಿಗಣಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಆದರೂ ಮೋದಿಯ ಪ್ರಭಾವ ಮೊದಲಿನಷ್ಟಿಲ್ಲ ಎಂದೂ ಅದು ತಿಳಿಸಿದೆ. ಈಗ ಚುನಾವಣೆ ನಡೆದರೂ ಮೋದಿಯೇ ಪ್ರಧಾನಿಯಾಗುವರು ಎಂದು ಎಬಿಪಿ ನ್ಯೂಸ್-ನಿಲ್ಸನ್ ನಡೆಸಿರುವ ಸಮೀಕ್ಷೆ ಬಹಿರಂಗ ಪಡಿಸಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 339 ಸ್ಥಾನ ಗಳಿಸಿದ್ದರೆ ಈಗ ಚುನಾವಣೆ ನಡೆಯುವುದಾದರೆ ಬಿಜೆಪಿಗೆ 301 ಸ್ಥಾನ ಸಿಗಲಿವೆ. ಅಂದರೆ ಎನ್ಡಿಎಗೆ ಶೇ. 38ರಷ್ಟು ಮತ ಗಳಿಸುವುದು. ದಕ್ಷಿಣ ಭಾರತದಲ್ಲಿ ಬಿಜೆಪಿಯೇ ಮುನ್ನಡೆ ಸಾಧಿಸಿದರೂ ಇತರ ಕಡೆ ಬಿಜೆಪಿ ಪ್ರಭಾವ ಕ್ಷೀಣಿಸಲಿದೆ. ಸಮೀಕ್ಷೆ ಪ್ರಕಾರ ಬಿಜೆಪಿಗೆ 37 ಸೀಟು ಮಾತ್ರ ಕಡಿಮೆ ಆಗಲಿವೆ. ಈಗ ಯುಪಿಎಗೆ ಕೇವಲ 62 ಸೀಟುಗಳಿವೆ.
ಇದು ಈಗ ಚುನಾವಣೆ ನಡೆದರೆ 108 ಆಗಲಿದೆ. ಈಶಾನ್ಯ ವಲಯದಲ್ಲಿ ಯುಪಿಎ ಹೆಚ್ಚಿನ ಮುನ್ನಡೆ ಸಾಧಿಸಲಿದೆ. ಇತರ ಪಕ್ಷಗಳ ಸೀಟುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಈಗಿರುವ 132 ಪಾರ್ಲಿಮೆಂಟ್ ಸೀಟುಗಳು 114ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 54 ಮಂದಿ ಪ್ರಧಾನಿಯಾಗಿ ಮೋದಿ ಸರಾಸರಿಯಲ್ಲಿ ಮೇಲಿದ್ದಾರೆ ಎಂದು ಹೇಳಿದ್ದಾರೆ. ಶೇ. 17ರಷ್ಟು ಮಂದಿ ಪ್ರಧಾನಿಯಾಗಿ ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಅದಲ್ಲದೆ ಮೋದಿಯ ಸರಕಾರದ ಕೆಲಸಗಳನ್ನು ಕೂಡಾ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಶ್ಲಾಘಿಸಿದ್ದಾರೆ ಎಂದು ಎಬಿಪಿ ನ್ಯೂಸ್-ನಿಲ್ಸನ್ ಸರ್ವೇ ಹೇಳಿಕೊಂಡಿದೆ