ಅಪರಿಚಿತರಿಗೆ ನಿಮ್ಮ ಕಾಂಟ್ಯಾಕ್ಟ್ ವಿವರ ಸಿಗಬಾರದೆ ? ಹಾಗಾದರೆ ನಿಮ್ಮ ನಂಬರನ್ನು ಟ್ರು ಕಾಲರ್ ನಿಂದ ತೆಗೆಯುವುದು ಹೀಗೆ

Update: 2016-01-27 15:04 GMT

ಟ್ರುಕಾಲರ್ ನಿಮಗೆ ಕರೆ ಮಾಡುವ ಅಪರಿಚಿತರ ವಿವರಗಳನ್ನು ನೀಡುವ ಖ್ಯಾತ ಆಪ್. ಈ ಆಪ್ ತನ್ನ ಬಳಕೆದಾರರಿಂದಲೇ ಇತರರ ಕಾಂಟ್ಯಾಕ್ಟ್ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಹಾಗಾಗಿ ನೀವು ಒಮ್ಮೆಯೂ ಈ ಆಪ್ ಅನ್ನು ಬಳಸಿಲ್ಲದಿದ್ದರೂ ನಿಮ್ಮ ಹೆಸರು ಹಾಗು ನಂಬರ್ ಟ್ರುಕಾಲರ್ ನ ಡಾಟಾ ಬೇಸ್ ನಲ್ಲಿ ಇರುವ ಸಾಧ್ಯತೆ ಇದ್ದೇ ಇದೆ. ಯಾಕೆಂದರೆ ನಿಮ್ಮ ಕಾಂಟ್ಯಾಕ್ಟ್ ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡ ಬೇರೆಯವರ ಮೂಲಕ ಟ್ರುಕಾಲರ್ ನಿಮ್ಮ ವಿವರ ಪಡೆದಿರುತ್ತದೆ.

ಸಾಮಾನ್ಯವಾಗಿ ಇದು ಹೆಚ್ಚಿನ ಮೊಬೈಲ್ ಬಳಕೆದಾರರಿಗೆ ಗೊತ್ತೂ ಇದೆ. ಆದರೆ ಹೆಚ್ಚಿನವರಿಗೆ ಗೊತ್ತಿಲ್ಲದ ವಿಷಯ ಒಂದಿದೆ. ಅದೇನೆಂದರೆ ಟ್ರುಕಾಲರ್ ಲ್ಯಾಂಡ್ ಲೈನ್ ಗಳ ವಿಳಾಸಗಳನ್ನು ಪಡೆಯುತ್ತದೆ. ಅದಕ್ಕೂ ಅದು ಸಾರ್ವಜನಿಕ ಮೂಲಗಳನ್ನೇ ಬಳಸುತ್ತದೆ. ಹಾಗೆ ವಿಳಾಸ ಪಡೆಯುವುದು ಈಗ ಮೊದಲಿನಷ್ಟು ಕಷ್ಟವೂ ಅಲ್ಲ. ನಿಮ್ಮ ಲ್ಯಾಂಡ್ ಲೈನ್ ನಂಬರ್ ಗೊತ್ತಿದ್ದರೆ ಯಾವುದೇ ಟೆಲಿಕಾಂ ಕಂಪೆನಿಗಳು ನೀಡುವ  ಸಾರ್ವಜನಿಕವಾಗಿ ಲಭ್ಯ ಫೋನ್ ಬುಕ್ ಗಳ ಮೂಲಕ ನಿಮ್ಮ ನೋಂದಾಯಿತ ವಿಳಾಸವನ್ನು ಪಡೆಯಬಹುದು ಅಥವಾ ಸುಮ್ಮನೆ ಗೂಗಲ್ ನಲ್ಲಿ ನಿಮ್ಮ ಲ್ಯಾಂಡ್ ಲೈನ್ ನಂಬರ್  ಕೊಟ್ಟರೂ ನಿಮ್ಮ ವಿಳಾಸ ಬೇಕಾದವರಿಗೆ ಸಿಗುತ್ತದೆ . 

ಆದ್ದರಿಂದ ನೀವು ನಿಮ್ಮ ನಂಬರ್ ಅನ್ನು ಟ್ರು ಕಾಲರ್ ನಿಂದ ಆದಷ್ಟು ಬೇಗ ತೆಗೆಯುವುದು ಒಳ್ಳೆಯದು. ಆದರೆ ನೀವು ಸ್ವತ: ಟ್ರು ಕಾಲರ್ ಆಪ್ ಬಳಸುತ್ತಿದ್ದರೆ ನಿಮ್ಮ ನಂಬರನ್ನು ಅದರಿಂದ ತೆಗೆಯಲು ಅಸಾಧ್ಯ. ಮೊದಲು ನಿಮ್ಮ ಟ್ರು ಕಾಲರ್ ಅಕೌನ್ಟ್ ಡಿ ಆಕ್ತಿವೆಟ್ ಮಾಡಬೇಕು. 

ನೀವು ನಿಮ್ಮ ಮೊಬೈಲ್ ನಿಂದ ಶಾಶ್ವತವಾಗಿ ಟ್ರು ಕಾಲರ್ ತೆಗೆಯಲು ನಿರ್ಧರಿಸಿದರೆ , ಅದನ್ನು ಹೇಗೆ ಮಾಡಬೇಕು ಎಂದು ಇಲ್ಲಿ ವಿವರಿಸಲಾಗಿದೆ. ಅಂಡರಾಯ್ಡ್ , ಐ ಫೋನ್ ಹಾಗು ವಿಂಡೋಸ್ ಫೋನ್ ಗಳಿಗೆ ಯಾವ ವಿಧಾನ ಎಂದು ಇಲ್ಲಿ ಇದೆ. 

Steps to deactivate your Truecaller account

Android
Open the app > tap the people icon in the upper left corner > Settings > About > Deactivate account.

iPhone
Open the app > tap the gear icon in the top right corner > About Truecaller > Scroll down >Deactivate Truecaller.

Windows Mobile
Open the app and tap the three dots in the bottom right corner > Settings > Help > Deactivate account.

Once you have deactivated your Truecaller account, you can proceed to removing your number from the service. Here's how.

How to remove your number from Truecaller

1.    Go to the Truecaller unlist page.

2.    Enter your phone number with the correct country code. For example: +911140404040 or+919999999999.

3.    Tick one of the reasons for unlisting, or if you wish, type your reasons for removal in the Otherform.

4.    Key in the verification captcha.

5.    Click Unlist.                                                                             

ನೀವು ಅನ್ ಲಿಸ್ಟ್ ಮನವಿ ನೀಡಿ 24 ಗಂಟೆಗಳೊಳಗೆ ಟ್ರು ಕಾಲರ್ ನಿಮ್ಮ ನಂಬರನ್ನು ತೆಗೆಯುತ್ತದೆ ಅದು ಹೇಳಿದೆ. ಆದರೆ ನೀವು ಒಮ್ಮೆ ತೆಗೆದರೆ ಮತ್ತೆ ನಿಮ್ಮ ನಂಬರ್ ಅದರ ಡಾಟಾ ಬೇಸ್ ಗೆ ಬರುವುದೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆಗಾಗ ಟ್ರು ಕಾಲರ್ ಬಳಸುವ ನಿಮ್ಮ ಸ್ನೇಹಿತರ ಬಳಿ ನಿಮ್ಮ ನಂಬರ್ ಸಿಗುತ್ತಿದೆಯೆ ಎಂದು ವಿಚಾರಿಸಿ ನೋಡಬೇಕು. ಮತ್ತೆ ಸಿಗುತ್ತಿದೆ ಎಂದಾದರೆ ಮತ್ತೆ ನಿಮ್ಮ ನಂಬರ್ ಅನ್ ಲಿಸ್ಟ್ ಮಾಡಿಸಬೇಕು. 

ಕೃಪೆ : ಎನ್ಡಿಟಿವಿ 

Download the Gadgets 360 app for Android and iOS to stay up to date with the latest tech news, product reviews, and exclusive deals on the popular mobiles.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News