ಫೆಬ್ರವರಿಯಲ್ಲಿ ಇರ್ಫಾನ್ ಪಠಾಣ್ ವಿವಾಹ

Update: 2016-01-27 18:04 GMT

ವಡೋದರ, ಜ.27: ಭಾರತದ ಆಲ್‌ರೌಂಡರ್ ಇರ್ಫಾನ್ ಪಠಾಣ್ ಫೆಬ್ರವರಿಯ ಎರಡನೆ ವಾರದಲ್ಲಿ ವಿವಾಹವಾಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ವೈಯಕ್ತಿಕ ವಿಷಯವನ್ನು ಚರ್ಚಿಸಲು ಇಷ್ಟಪಡಲಾರೆ ಎಂದು ಇರ್ಫಾನ್ ಯಾವಾಗಲೂ ಹೇಳುತ್ತಿರುತ್ತಾರೆ. ಪಠಾಣ್ ಕುಟುಂಬ ಸದಸ್ಯರು ಮದುವೆಯ ತಯಾರಿಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ.

‘‘ನಾನು ಫೆಬ್ರವರಿಯಲ್ಲಿ ಮದುವೆಯಾಗುತ್ತಿರುವ ಸುದ್ದಿಯಲ್ಲಿ ನಿಜವಿದೆ. ಇದಕ್ಕಿಂತ ಹೆಚ್ಚು ತಾನೇನೂ ಹೇಳಲಾರೆ. ಈ ವಿಷಯದ ಕುರಿತು ಕೆಲವೇ ದಿನಗಳಲ್ಲಿ ಹೇಳಿಕೆ ನೀಡುವೆ’’ಎಂದು ಇರ್ಫಾನ್ ಪ್ರತಿಕ್ರಿಯಿಸಿದ್ದಾರೆ.

ಮೂಲಗಳ ಪ್ರಕಾರ ಇರ್ಫಾನ್ ಮದುವೆಯ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಸೂರತ್‌ನ ಖ್ಯಾತ ಜ್ಯುವೆಲ್ಲರಿಯಲ್ಲಿ ಇರ್ಫಾನ್‌ನ ಭಾವೀ ಪತ್ನಿಗೆ ವಜ್ರದ ನೆಕ್ಲೇಸ್‌ಗೆ ಈಗಾಗಲೇ ಆರ್ಡರ್ ನೀಡಲಾಗಿದೆ. ಫೆಬ್ರವರಿಯ ಎರಡನೆ ವಾರದಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News