ಬಾಂಬ್ ಭೀತಿ: ಎರಡು ವಿಮಾನಗಳ ಪ್ರಯಾಣ ವಿಳಂಬ
Update: 2016-01-27 23:47 IST
ಹೊಸದಿಲ್ಲಿ,ಜ.27: ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿಂದ ಕಠ್ಮಂಡುವಿಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಮತ್ತು ಜೆಟ್ ಏರ್‌ವೇಸ್ ವಿಮಾನಗಳ ಪ್ರಯಾಣವನ್ನು ತಡೆಹಿಡಿಯಲಾಯಿತು.
ಇಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಜೆಟ್ ಏರ್‌ವೇಸ್ ಕಚೇರಿಗೆ ರಾತ್ರಿ ಬಾಂಬ್ ಬೆದರಿಕೆಯ ಕರೆ ಬಂದಿದ್ದು, ಇವೆರಡೂ ವಿಮಾನಗಳ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.
ಇವೆರಡೂ ವಿಮಾನಗಳು ನಸುಕಿನ 1:15ಕ್ಕೆ ಮತ್ತು 1:30ಕ್ಕೆ ಪ್ರಯಾಣ ಆರಂಭಿಸಲಿದ್ದವು.
ವಿಮಾನಗಳಲ್ಲಿದ್ದ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ತೆರವುಗೊಳಿಸಲಾಗಿದ್ದು, ಬಾಂಬ್‌ಗಳಿಗಾಗಿ ತಡರಾತ್ರಿಯವರೆಗೂ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
ಶೋಧ ಕಾರ್ಯಾಚರಣೆ ಪೂರ್ಣಗೊಂಡ ನಂತರ ಇವೆರಡೂ ವಿಮಾನಗಳು ವಿಳಂಬವಾಗಿ ಯಾನ ಆರಂಭಿಸಲಿವೆ ಎಂದು ಏರ್ ಇಂಡಿಯಾ ಮತ್ತು ಜೆಟ್ ಏರ್‌ವೇಸ್ ತಿಳಿಸಿವೆ.