×
Ad

ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ನಿಷೇಧಕ್ಕೆ ಗೋವಾ ಚಿಂತನೆ

Update: 2016-01-27 23:50 IST

 ಪಣಜಿ, ಜ.27: ಪಾನ ಮತ್ತ ಸ್ಥಿತಿಯಲ್ಲಿ ಜನರು ಕಿರುಕುಳ ನೀಡುವುದನ್ನು ತಪ್ಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ನಿಷೇಧ ಹೇರಲು ಗೋವಾ ಸರಕಾರ ಚಿಂತನೆ ನಡೆಸುತ್ತಿದೆಯೆಂದು ಬುಧವಾರ ಹಿರಿಯಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಯ ಕುರಿತು ಜನ ಸಾಮಾನ್ಯರಿಂದ ದೂರುಗಳು ಬಂದಿವೆ. ಇದರಿಂದ ವಾಲಾಟ ಮತ್ತಿತರ ಕಿರುಕುಳಗಳು ಸಂಭವಿಸುತ್ತವೆ. ಅದಕ್ಕಾಗಿ ಈಗಿರುವ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆಯೆಂದು ಗೋವಾದ ಅಬ್ಕಾರಿ ಆಯಕ್ತ ವೆುನಿನೊ ಡಿಸೋಜಾ ಹೇಳಿದ್ದಾರೆ.
ರಾಜ್ಯದ ಅಬ್ಕಾರಿ ಇಲಾಖೆಯು ಗೋವಾ, ದಿಯು-ಡಾಮನ್ ಅಬ್ಕಾರಿ ಕಾಯ್ದೆ- 1964ಕ್ಕೆ ತಿದ್ದುಪಡಿ ತರಲಿದೆ. ಇದರಿಂದ ಇಲಾಖೆಯ ಇನ್‌ಸ್ಟೆಕ್ಟರ್‌ಗಳಿಗೆ ತಪ್ಪಿಪಸ್ಥರನ್ನು ಶಿಕ್ಷಿಸುವ ಅಧಿಕಾರ ಲಭಿಸಲಿದೆಯೆಂದು ಅವರು ತಿಳಿಸಿದ್ದಾರೆ.
ಸರಕಾರಿ ದಾಖಲೆಯ ಪ್ರಕಾರ ಗೋವಾದಲ್ಲಿ 33 ಸಗಟು ಮದ್ಯ ಮಾರಾಟ ಅಂಗಡಿಗಳು ಹಾಗೂ 9,445 ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News