ಉತ್ತರ ಕೊರಿಯದ ಮೇಲೆ ಗಮನ: ಜಪಾನ್
Update: 2016-01-28 23:30 IST
ಟೋಕಿಯೊ, ಜ. 28: ಉತ್ತರ ಕೊರಿಯದ ಕ್ಷಿಪಣಿಗಳಿಗೆ ಸಂಬಂಧಿಸಿದ ಚಲನವಲನಗಳ ಮಾಹಿತಿಯನ್ನು ಜಪಾನ್ ‘‘ಅತ್ಯಂತ ಉತ್ಸಾಹ’’ದಿಂದ ನಿರಂತರವಾಗಿ ಸಂಗ್ರಹಿಸುತ್ತಾ ವಿಶ್ಲೇಷಣೆ ಮಾಡುತ್ತಿದೆ ಎಂದು ಜಪಾನ್ ಸರಕಾರದ ವಕ್ತಾರರು ಗುರುವಾರ ಹೇಳಿದ್ದಾರೆ. ‘‘ಪ್ರಚೋದನಾತ್ಮಕ ಕೃತ್ಯ’’ದಿಂದ ದೂರವಿರುವಂತೆ ಹಾಗೂ ವಿಶ್ವಸಂಸ್ಥೆಯ ನಿರ್ಣಯಗಳನ್ನು ಗೌರವಿಸುವಂತೆ ಉತ್ತರ ಕೊರಿಯವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಗಳಂಥ ದೇಶಗಳಿಗೆ ಸಹಕಾರ ನೀಡುವುದನ್ನು ಜಪಾನ್ ಮುಂದುವರಿಸುವುದಾಗಿಯೂ ಉಪ ಮುಖ್ಯ ಸಂಪುಟ ಕಾರ್ಯದರ್ಶಿ ಕೊಯಿಚಿ ಹಗಿಯುಡ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.