×
Ad

ಭಾರತದ ಶೂಟರ್ ಕಿನಾನ್ ಒಲಿಂಪಿಕ್ಸ್‌ಗೆ

Update: 2016-01-28 23:31 IST

ಹೊಸದಿಲ್ಲಿ, ಜ.28: ಏಷ್ಯನ್ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ನಾಲ್ಕನೆ ಸ್ಥಾನ ಪಡೆದಿರುವ ಕಿನಾನ್ ಚೇನಾ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಶೂಟರ್ ವಿಜಯ್ ಕುಮಾರ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದಾರೆ.

 ಗುರುವಾರ ನಡೆದ ಸ್ಪರ್ಧೆಯಲ್ಲಿ ಒಟ್ಟು 120 ಅಂಕ ಗಳಿಸಿರುವ ಕಿನಾನ್ ಆರು ಶೂಟರ್‌ಗಳು ಭಾಗವಹಿಸಿದ್ದ ಫೈನಲ್ ಸುತ್ತಿಗೆ ಅರ್ಹತೆ ಪಡೆದರು. ಫೈನಲ್ ಸುತ್ತಿನಲ್ಲಿ ಮೂವರು ಶೂಟರ್‌ಗಳೊಂದಿಗೆ ಟೈ ಸಾಧಿಸಿದ್ದ ಅವರು ಸೆಮಿ ಫೈನಲ್‌ಗೆ ತಲುಪಿದ್ದಾರೆ. ಈ ಮೂಲಕ ಕಿನಾನ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದ ಭಾರತದ 10ನೆ ಶೂಟರ್ ಎನಿಸಿಕೊಂಡರು.

ಪುರುಷರ 25 ಮೀ. ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ 576 ಅಂಕ ಗಳಿಸಿದ್ದ ವಿಜಯ್ ಕುಮಾರ್ ಫೈನಲ್ ಸುತ್ತಿಗೆ ತಲುಪಿದ್ದರು. ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಕನಸು ಕಂಡಿದ್ದರು. ಆದರೆ, ಫೈನಲ್ ರೌಂಡ್‌ನಲ್ಲಿ 5ನೆ ಸ್ಥಾನ ಪಡೆದ ವಿಜಯ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News