ಒಮನ್‌ನಲ್ಲಿ ರಸ್ತೆ ಅಪಘಾತ ಕೇರಳದ ಇಬ್ಬರು ಸೇರಿದಂತೆ ಐವರ ಮೃತ್ಯು
Update: 2016-01-29 12:39 IST
ಕಾಸರಗೋಡು, ಜ.29: ಒಮನ್ ನ ನಿಝ್ವಾದಲ್ಲಿ ಶಾಲಾ ಬಸ್ ಮತ್ತು ಭಾರೀ ವಾಹನವೊಂದು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕೇರಳದ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳಾದ ಕಣ್ಣೂರಿನ ಮುಹಮ್ಮದ್ ಶಮ್ಮಾಸ್ ಮತ್ತು ಕೊಟ್ಟಾಯಂನ ರುಯಾ ಅಮಾನ್ , ಶಿಕ್ಷಕಿ ಮಹಾರಾಷ್ಟ್ರದ ದೀಪಾಳಿ ಹಾಗೂ ಸ್ಥಳೀಯ ಇಬ್ಬರು ಉದ್ಯೋಗಿಗಳು ಮೃತಪಟ್ಟಿದ್ಧಾರೆ.
ನಿಝ್ವಾ ಇಂಡಿಯನ್ ಸ್ಕೂಲ್‌ನ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಬಸ್‌ನಲ್ಲಿ ಬಾಹ್ಲಿಕ್ಕೆ ಪ್ರವಾಸ ಹೊರಟಿದ್ದಾಗ ಭಾರೀ ವಾಹನವೊಂದು ಬಸ್‌ಗೆ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮವಾಗಿ ಬಸ್‌ನಲ್ಲಿದ್ದ ಐವರು ಮೃತಪಟ್ಟರು. 20ಮಂದಿ ವಿದ್ಯಾರ್ಥಿಗಳು ಗಾಯಗೊಂಡರು. ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ನಿಝ್ವಾ ಆಸ್ಪತ್ರೆಗೆ ದಾಖಲಿಸಲಾಗಿದೆ.