ಲಂಡನ್ ಟು ನ್ಯೂಯಾರ್ಕ್ ಗೆ ಕೇವಲ ೧೧ ನಿಮಿಷ !
Update: 2016-01-29 16:36 IST
ಹೊಸದಿಲ್ಲಿ, ಜ. ೨೯ : ಮಾಕ್ ಟೆನ್ ವೇಗದಲ್ಲಿ ಹೋಗುವ ಏರ್ ಕ್ರಾಫ್ಟ್ ಸ್ಕ್ರೀಮ್ರ್ ಅನ್ನು ಅಭಿವೃದ್ಧಿಪಡಿಸಿದ ಚಾರ್ಲ್ಸ್ ಬೋಮ್ಬಾರ್ಡಿಯರ್ ಇದೀಗ ಹೊಸ ಜೆಟ್ ಒಂದನ್ನು ಅನಾವರಣ ಮಾಡಿದ್ದಾರೆ. ಇದರ ವಿಶೇಷತೆ ಏನು ಗೊತ್ತೇ ? ಈ ಹೈಪರ್ ಸೋನಿಕ್ ಜೆಟ್ ಲಂಡನ್ ನಿಂದ ನ್ಯೂ ಯಾರ್ಕ್ ಗೆ ಕೇವಲ 11 ನಿಮಿಷದಲ್ಲಿ ತಲುಪುತ್ತದೆ ಎಂಬುದು ಚಾರ್ಲ್ಸ್ ವಾದ. ಇದರ ಹೆಸರು ಆಂಟಿ ಪಾಡ್ (Antipode). ಈಗ ಲಂಡನ್ ಹಾಗು ನ್ಯೂ ಯಾರ್ಕ್ ನಡುವೆ ಪ್ರಯಾಣಿಸಲು ಕನಿಷ್ಠ 8 ಗಂಟೆ ಬೇಕು.
ಈ ಆಂಟಿ ಪಾಡ್ ಸ್ಕ್ರೀಮ್ರ್ ನ ದುಪ್ಪಟ್ಟು ವೇಗ ( ಮಾಕ್ 24) ಹಾಗು ಕಾನ್ಕಾರ್ಡ್ ನ 12 ಪಟ್ಟು ವೇಗದಲ್ಲಿ ಹೋಗಬಲ್ಲುದು. ಅಂದರೆ 10 ಜನರೊಂದಿಗೆ ಸುಮಾರು 20,000 ಕಿ. ಮಿ. ದೂರವನ್ನು ಒಂದು ಗಂಟೆಗಿಂತ ಕಡಿಮೆ ಸಮಯದಲ್ಲಿ ಮುಟ್ಟುತ್ತದೆ !
ಕಳೆದ ವರ್ಷವಷ್ಟೇ ಮಾಕ್ ಟೆನ್ ವೇಗದಲ್ಲಿ ಹೋಗುವ ಏರ್ ಕ್ರಾಫ್ಟ್ ಸ್ಕ್ರೀಮ್ರ್ ಅನ್ನು ತಂದ ಚಾರ್ಲ್ಸ್ ಈಗ ಈ ಹೊಸ ಸಾಹಸ ಮಾಡಿದ್ದಾರೆ.