×
Ad

ವೆನೆಝುವೆಲಾದಲ್ಲಿ ಝಿಕ ವಿಷಾಣು ಬಾಧೆ: ಶಂಕಿತ4,700 ಪ್ರಕರಣಗಳು ಪತ್ತೆ

Update: 2016-01-29 18:05 IST

ಕರಾಕಸ್/ಪ್ಯಾರಿಸ್: ವೆನೆಜುವೆಲಾದಲ್ಲಿ ಝಿಕ ವೈರಸ್ ತಗಲಿರುವವರೆಂದು ಶಂಕಿಸಲಾದ 4,700 ಪ್ರಕರಣಗಳು ಪತ್ತೆಯಾಗಿವೆ. ಫ್ರಾನ್ಸ್ ಸರಕಾರ ವಿದೇಶಿ ಪ್ರವಾಸದಿಂದ ದೇಶಕ್ಕೆ ಮರಳಿದ ಐವರಲ್ಲಿ ಶಂಕಿತ ಝಿಕ ವಿಷಾಣು ಹರಡಿವೆ ಎಂದು ಹೇಳಿದೆ. ಝಿಕ ವೈರಸ್‌ಶಿಶುಗಳ ಮೆದುಳನ್ನು ಹಾನಿ ಮಾಡುತ್ತಿವೆ. ಲ್ಯಾಟಿನ್ ಅಮೆರಿಕದಲ್ಲಿ ಸಾವಿರಾರು ಇಂತಹ ಇತರ ಶಂಕಿತ ಪ್ರಕರಣಗಳು ಪತ್ತೆಯಾಗಿವೆ.

ಸೊಳ್ಳೆಗಳಿಂದ ಈ ರೋಗ ಹರಡುತ್ತಿರುವುದರಿಂದಾಗಿ ಇದನ್ನು ತಡೆಗಟ್ಟುವಲ್ಲಿ ಆರೋಗ್ಯಕ್ಷೇತ್ರ ವಿಫಲವಾಗಿದೆ ಎನ್ನಲಾಗಿದೆ. ವೆನೆಜುವೆಲಾದ ಆರೋಗ್ಯ ಸಚಿವಲುಯಿಸನ್ ಮೆಲೊ ನಮ್ಮಲ್ಲಿ 4,700 ಇಂತಹ ರೋಗಿಗಳು ಪತ್ತೆಯಾಗಿದ್ದಾರೆ.ಝಿಕ ರೋಗಾಣು ಪೀಡಿತರೆಂದು ಅವರನ್ನುಶಂಕಿಸಲಾಗಿದೆ. ಮೊತ್ತಮೊದಲ ಬಾರಿ ಮೂರು ಕೋಟಿ ಜನಸಂಖ್ಯೆಯಿರುವ ದಕ್ಷಿಣ ಅಮೆರಿಕದ ದೇಶವೊಂದು ತಮ್ಮಲ್ಲಿರುವ ಶಂಕಿತ ರೋಗಿಗಳ ಸಂಖ್ಯೆಯನ್ನು ಬಹಿರಂಗಪಡಿಸುತ್ತಿರುವುದಾಗಿದೆ. ಅದೇವೇಳೆ ಫ್ರಾನ್ಸ್ ತನ್ನ ಯಾವ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿಲ್ಲ ಎಂದು ತಿಳಿಸಿದೆ. ವಿಶ್ವ ಆರೋಗ್ಯ ಸಂಘಟನೆಯು ನಿನ್ನೆ ಅಮೆರಿಕ ಮಹಾದ್ವೀಪದಲ್ಲಿ ಝಿಕ ವೈರಸ್ ಭಾರೀ ವೇಗದಿಂದ ಹರಡುತ್ತಿವೆ ಎಂದು ಎಚ್ಚರಿಸಿತ್ತು. ಈ ಕ್ಷೇತ್ರದಲ್ಲಿ ಪ್ರಕರಣ 40ಲಕ್ಷದವರೆಗೂ ಆಗಬಹುದೆಂದೂ ಹೇಳಿತ್ತು. ವೆನೆಜುವೆಲ ಝಿಕ ಪತ್ತೆಯಾಗಿರುವ 20ದೇಶಗಳಲ್ಲಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News