ಆಸ್ಟ್ರೇಲಿಯ: ಹುಸಿ ಬಾಂಬ್; ಸಾವಿರಾರು ವಿದ್ಯಾರ್ಥಿಗಳ ತೆರವು
Update: 2016-01-29 23:12 IST
ಸಿಡ್ನಿ, ಜ. 29: ಹುಸಿ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯದ ಎರಡು ರಾಜ್ಯಗಳ ಶಾಲೆಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನು ಇಂದು ತೆರವುಗೊಳಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನ್ಯೂಸೌತ್‌ವೇಲ್ಸ್ ಮತ್ತು ವಿಕ್ಟೋರಿಯ ರಾಜ್ಯಗಳ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳನ್ನು ತೆರವುಗೊಳಿಸಲಾಯಿತು ಅಥವಾ ಶಾಲೆಗಳಿಗೆ ಬೀಗ ಜಡಿಯಲಾಯಿತು.
ಇಂಥದೇ ಬೆದರಿಕೆಯ ಫೋನ್ ಕರೆಗಳ ಹಿನ್ನ್ನೆಲೆಯಲ್ಲಿ ಗುರುವಾರ ಫ್ರಾನ್ಸ್, ಇಟಲಿ ಮತ್ತು ಬ್ರಿಟನ್‌ಗಳ 20ಕ್ಕೂ ಅಧಿಕ ಶಾಲೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.