×
Ad

ಸೌದಿ: ಮಸೀದಿಯಲ್ಲಿ ಗುಂಡು ಹಾರಾಟಕ್ಕೆ 3 ಬಲಿ

Update: 2016-01-29 23:14 IST

ರಿಯಾದ್, ಜ. 29: ಸೌದಿ ಅರೇಬಿಯದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
 ಮೆಹಸಿನ್ ನಗರದ ಇಮಾಮ್ ರೇಝ ಮಸೀದಿಯಲ್ಲಿ ಪ್ರಾರ್ಥನೆಯ ವೇಳೆ ಈ ದಾಳಿ ನಡೆದಿದೆ.
ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ ಇನ್ನಷ್ಟು ಏರಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಗುಂಡು ಹಾರಾಟದಿಂದ ಸಾವು ನೋವು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಾಂಬ್ ಹೊಂದಿದ್ದ ಬೆಲ್ಟನ್ನು ಸ್ಫೋಟಿಸುವುದರಿಂದ ಆತ್ಮಹತ್ಯಾ ಬಾಂಬ್‌ಧಾರಿಯನ್ನು ಜನರು ತಡೆದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News