ಕೊರಿಯದ ಕ್ಷಿಪಣಿಯನ್ನು ಹೊಡೆದುರುಳಿಸಲು ಜಪಾನ್ ಸಿದ್ಧ
Update: 2016-01-29 23:18 IST
ಟೋಕಿಯೊ, ಜ. 29: ಉತ್ತರ ಕೊರಿಯ ಸಿಡಿಸುವ ಯಾವುದೇ ಕ್ಷಿಪಣಿ ದೇಶದ ಭದ್ರತೆಗೆ ಅಪಾಯ ಒಡ್ಡಿದರೆ ಅದನ್ನು ನಾಶಪಡಿಸಲು ಸಿದ್ಧವಾಗಿರುವಂತೆ ಜಪಾನ್ ತನ್ನ ಸೇನೆಗೆ ಆದೇಶ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ಇಂದು ವರದಿ ಮಾಡಿವೆ.
ರಾಕೆಟೊಂದನ್ನು ಉಡಾಯಿಸಲು ಪ್ಯಾಂಗ್‌ಯಾಂಗ್ ಸಿದ್ಧತೆ ನಡೆಸುತ್ತಿದೆ ಎಂಬ ಕಳವಳ ಹೆಚ್ಚುತ್ತಿರುವಂತೆಯೇ ಜಪಾನ್ ತನ್ನ ಸಿದ್ಧತೆಗಳನ್ನು ಮಾಡಿಕೊಂಡಿದೆ.
ರಕ್ಷಣಾ ಸಚಿವ ಜನರಲ್ ನಕಟನಿ ಈ ಆದೇಶ ಹೊರಡಿಸಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ.
ಪ್ಯಾಂಗ್‌ಯಾಂಗ್‌ನ ಪ್ರಧಾನ ಉಪಗ್ರಹ ಸಂಕೀರ್ಣದಲ್ಲಿ ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ಮುಂದಿನ ವಾರವೇ ಅದು ಕ್ಷಿಪಣಿ ಹಾರಾಟ ನಡೆಸಬಹುದು ಎಂಬ ಊಹಾಪೋಹಗಳು ಹಬ್ಬಿರುವುದನ್ನುಸ್ಮರಿಸಬಹುದಾಗಿದೆ.