×
Ad

ಮಾ.10ರಂದು ದೇಶಾದ್ಯಂತ ಮುಷ್ಕರ

Update: 2016-01-29 23:56 IST

ಹೊಸದಿಲ್ಲಿ,ಜ.29: ಕೇಂದ್ರ ಮತ್ತು ಕೆಲವು ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಮತ್ತು ಕಾರ್ಮಿಕ ಸುಧಾರಣೆಗಳ ಮೂಲಕ ಕಾನೂನಿನಲ್ಲಿ ಬದಲಾವಣೆಗಳನ್ನು ವಿರೋಧಿಸಿ ಮಾ.10ರಂದು ಮುಷ್ಕರವನ್ನು ನಡೆಸಲು ಬಿಜೆಪಿ ಬೆಂಬಲಿತ ಬಿಎಂಎಸ್ ಸೇರಿದಂತೆ ಕೇಂದ್ರ ಕಾರ್ಮಿಕ ಒಕ್ಕೂಟಗಳು ನಿರ್ಧರಿಸಿವೆ.
12 ಬೇಡಿಕೆಗಳ ಸನ್ನದಿಗೆ ಸರಕಾರದ ಉಪೇಕ್ಷೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ದೃಢವಾದ ಕ್ರಮಗಳನ್ನು ಕೈಗೊಳ್ಳಲು ಕಾರ್ಮಿಕರೊಂದಿಗೆ ಚರ್ಚೆಯ ಪುನರಾರಂಭಕ್ಕೆ ನಿರಾಕರಣೆಯನ್ನು ವಿರೋಧಿಸಿ ಮಾ.10ನ್ನು ಅಖಿಲ ಭಾರತ ಪ್ರತಿಭಟನಾ ದಿನವನ್ನಾಗಿ ಆಚರಿಸಲು 11 ಕಾರ್ಮಿಕ ಒಕ್ಕೂಟಗಳು ಜ.27ರಂದು ಸಭೆ ಸೇರಿ ನಿರ್ಧರಿಸಿವೆ ಎಂದು ಈ ಸಂಘಟನೆಗಳ ಜಂಟಿ ಹೇಳಿಕೆಯು ತಿಳಿಸಿದೆ. ಮುಂದಿನ ಕ್ರಮವನ್ನು ನಿರ್ಧರಿಸಲು ಮಾರ್ಚ್ ಕೊನೆಯ ವಾರದಲ್ಲಿ ದಿಲ್ಲಿಯ ತಾಲಕಟೋರಾ ಕ್ರೀಡಾಂಗಣದಲ್ಲಿ ಕಾರ್ಮಿಕರ ರಾಷ್ಟ್ರೀಯ ಸಮಾವೇಶವೊಂದನ್ನು ನಡೆಸಲು ಒಕ್ಕೂಟಗಳು ನಿರ್ಧರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News