×
Ad

ಕೇರಳ ಪ್ರೌಢ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಮೇಲೆ ಎಸ್‌ಎಫ್‌ಐ ಹಲ್ಲೆ

Update: 2016-01-29 23:58 IST

ತಿರುವಂನತಪುರ, ಜ.29: ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ಕಾರ್ಯಕರ್ತರು ಶುಕ್ರವಾರ ಕೇರಳ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಟಿ.ಪಿ.ಶ್ರೀನಿವಾಸನ್‌ರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಶೈಕ್ಷಣಿಕ ಕಾರ್ಯಕ್ರಮವೊಂದಕ್ಕಾಗಿ ತಿರುವನಂತಪುರದ ಕೋವಳಂಗೆ ಬಂದಿದ್ದರು.
ಏಶ್ಯಾನೆಟ್ ಪ್ರಸಾರ ಮಾಡಿರುವ ವೀಡಿಯೊ ಒಂದರಲ್ಲಿ, ಎಸ್‌ಎಫ್‌ಐ ಕಾರ್ಯಕರ್ತನೊಬ್ಬ ಶ್ರೀನಿವಾಸನ್‌ರನ್ನು ಥಳಿಸುತ್ತಿರುವುದು ಸ್ಟಷ್ಟವಾಗಿ ಕಾಣಿಸಿದೆ ಬಳಿಕ ಇತರ ಬೆಂಬಲಿಗರು ಅವರನ್ನು ದೂಡುತ್ತಿರುವುದು ಹಾಗೂ ಜೋರಾಗಿ ತಳ್ಳುತ್ತಿರುವುದೂ ಕಂಡು ಬಂದಿದೆ.
ಸ್ಥಳದಲ್ಲಿದ್ದ ಪೊಲೀಸರು ತನ್ನನ್ನು ರಕ್ಷಿಸುವ ಪ್ರಯತ್ನ ನಡೆಸಿಲ್ಲವೆಂದು ಶ್ರೀನಿವಾಸನ್ ಆರೋಪಿಸಿದ್ದಾರೆ.
ಜಾಗತಿಕ ಶಿಕ್ಷಣ ಸಮ್ಮೇಳನದ ವೇದಿಕೆಯಿಂದ ಶ್ರೀನಿವಾಸನ್‌ರನ್ನು ದುಷ್ಕರ್ಮಿಗಳು ಎಳೆದು ತರುತ್ತಿದ್ದಾಗ, ಅವರನ್ನು ರಕ್ಷಿಸಲು ಯಾವನೇ ಪೊಲೀಸ್ ಅಧಿಕಾರಿ ಬಾರದಿದ್ದುದು ವೀಡಿಯೊ ದಲ್ಲಿ ಸಾಬೀತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News