×
Ad

ಹೊಸ ಬಸ್‌ಗಳ ಆವಶ್ಯಕತೆ ಇವೆಯೇ?

Update: 2016-01-30 00:23 IST

ಮಾನ್ಯರೆ,
ಇತ್ತೀಚೆಗೆ ಸಾರಿಗೆ ಸಚಿವರು ಸಾರಿಗೆ ಸಂಸ್ಥೆಗೆ 3,000 ಹೊಸ ಬಸ್‌ಗಳನ್ನು ಖರೀದಿಸಲಾಗುವುದೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ ಇದು ರಾಜ್ಯಕ್ಕೆ ಮತ್ತಷ್ಟು ಹೊರೆಯಾಗುವುದರಲ್ಲಿ ಅನುಮಾನವೇ ಇಲ್ಲ.

ನಾವು ದೇಶದ ಇತರ ರಾಜ್ಯದ ಸಾರಿಗೆ ವ್ಯವಸ್ಥೆಗಳಿಗಿಂತ ಅತಿ ಹೆಚ್ಚಿನ ಮತ್ತು ಹೊಸ ಹೊಸ ಮಾದರಿಯ ಬಸ್‌ಗಳನ್ನು ಹೊಂದಿರುವ ಹೆಗ್ಗಳಿಕೆ ಮಾತ್ರ ಈ ಬಸ್‌ಗಳಿಂದ ಸಾಧ್ಯ ಮತ್ತು ಮಧ್ಯವರ್ತಿಗಳಿಗೆ ಒಂದಿಷ್ಟು ಹಣವೂ ಗಳಿಕೆಯಾಗಬಹುದು. ಆದರೆ ಇದರಿಂದ ಆರ್ಥಿಕ ಲಾಭ ಸಾಧ್ಯವಿಲ್ಲ.

ಈಗಿರುವ ಕೆಲವು ಗ್ರಾಮಾಂತರಕ್ಕೆ ಹೋಗುವ ಬಸ್‌ಗಳನ್ನು ಬಿಟ್ಟರೆ, ಜಿಲ್ಲಾ ಕೇಂದ್ರಗಳಲ್ಲಿ ಅರ್ಧ ಗಂಟೆಗಳಿಗೊಂದರಂತೆ ಹೊರಡುವ ಹೆಚ್ಚಿನ ಬಸ್‌ಗಳನ್ನು ಗಮನಿಸಿದರೆ ಅವುಗಳಲ್ಲಿ 6-8ಕ್ಕಿಂತ ಹೆಚ್ಚಿನ ಪ್ರಯಾಣಿಕರಿರುವುದಿಲ್ಲ. ಹೀಗಾಗಿ ಶೇ. 42ರಷ್ಟು ಬಸ್ಸುಗಳು ನಷ್ಟದಿಂದ ಚಲಿಸುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಹೊಸ ಬಸ್ಸುಗಳನ್ನು ಕೊಳ್ಳುವ ಆವಶ್ಯಕತೆ ಏನಿತ್ತು?
ಈಗಿರುವ ಬಸ್‌ಗಳಲ್ಲೇ ಹೆಚ್ಚಿನ ಪ್ರಯಾಣಿಕರು ಸಂಚರಿಸುವ ವ್ಯವಸ್ಥೆ ಕೈಗೊಂಡರೆ ಜನರಿಗೂ ಉಪಯೋಗವಾದೀತು. ಸಂಸ್ಥೆಗೂ ಲಾಭವಾದೀತಲ್ಲವೇ?
                                                                             -ನಾಗರಾಜ್ ರಾವ್,
                                                                     (ಸಾರಿಗೆ ಸಂಸ್ಥೆ ಮಾಜಿ ನೌಕರ),
                                                                       ಬಸವನಹಳ್ಳಿ, ಚಿಕ್ಕಮಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News