ವರ್ಷಾಂತ್ಯಕ್ಕೆ ಝಿಕಾ ವೈರಸ್‌ಗೆ ಲಸಿಕೆ?
ವಾಷಿಂಗ್ಟನ್: ಹುಟ್ಟುಸಮಸ್ಯೆಗೆ ಕಾರಣವಾಗಿ ವಿಶ್ವವನ್ನೇ ಬೆಚ್ಚಿಬೀಳಿಸಿದ ಝಿಕಾ ವೈರಸ್‌ಗೆ ಈ ವರ್ಷದ ಕೊನೆಯ ಒಳಗಾಗಿ ಲಸಿಕೆ ಅಭಿವೃದ್ಧಿಪಡಿಸುವ ನಿರೀಕ್ಷೆ ಇದೆ. ಈಗಾಗಲೇ ಸಾವಿರಾರು ದೋಷಯುಕ್ತ ಶಿಶುಗಳು ಹುಟ್ಟಲು ಕಾರಣವಾಗಿರುವ ಝಿಕಾ ವೈರಸ್‌ಗೆ ತುರ್ತು ಸಂದರ್ಭದಲ್ಲಿ ಬಳಸಲು ಇದನ್ನು ಬಿಡುಗಡೆ ಮಾಡಲಾಗುವುದು ಎಂದು ಲಸಿಕೆ ಅಭಿವೃದ್ಧಿಪಡಿಸುತ್ತಿರುವ ತಜ್ಞರೊಬ್ಬರು ಅಮೆರಿಕ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಈ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಸಕ್ರಿಯರಾಗಿರುವ ಕೆನಡಾ ವಿಜ್ಞಾನಿ ಕೆರಿ ಕೊಬಿಂಬಗನ್ ಅವರ ಪ್ರಕಾರ, ಮೊದಲ ಹಂತದಲ್ಲಿ ಮನುಷ್ಯರ ಮೇಲೆ ಆಗಸ್ಟ್‌ನಲ್ಲಿ ಇದನ್ನು ಪ್ರಯೋಗಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ. ಅದು ಯಶಸ್ವಿಯಾದರೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಎಂದು ವಿವರಿಸಿದ್ದಾರೆ.
ಗುನಿಯಾದಲ್ಲಿ ಎಬೋಲಾ ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗಿರುವ ಕೊಬಿಂಗರ್ ಅವರು, "ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ. ಆದರೆ ಈ ಲಸಿಕೆ ಉತ್ಪಾದನೆ ಸುಲಭ. ಶೀಘ್ರದಲ್ಲೇ ಇದನ್ನು ವಾಸ್ತವವಾಗಿಸುತ್ತೇವೆ" ಎಂದು ಹೇಳಿದ್ದಾರೆ.