×
Ad

ಸೋಲಾರ್ ಲಂಚ ಸಿಬಿಐಗೆ ವಹಿಸದಿದ್ದರೆ ಬಿಜೆಪಿ ಕೋರ್ಟಿಗೆ: ಓ. ರಾಜಗೋಪಾಲನ್

Update: 2016-01-30 11:29 IST

   ಹೊಸದಿಲ್ಲಿ: ಸೋಲಾರ್ ಲಂಚ ಪ್ರಕರಣವನ್ನು ಸಿಬಿಐಗೆ ವಹಿಸಲು ಕೇರಳ ಸರಕಾರ ಸಿದ್ಧವಾಗದಿದ್ದರೆ ಬಿಜೆಪಿ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಕೇರಳ ಬಿಜೆಪಿ ನಾಯಕ ಓ. ರಾಜಗೋಪಾಲನ್ ಹೇಳಿದ್ದಾರೆ. ಸೋಲಾರ್ ಕೇರಳ ಕಂಡಿರುವ ಭಾರೀ ದೊಡ್ಡ ಭ್ರಷ್ಟಾಚಾರವಾಗಿದೆ. ಇದರ ನಾಯಕ ಸ್ವತಃ ಮುಖ್ಯಮಂತ್ರಿಯಾಗಿದ್ದಾರೆ. ಮಾನಮರ್ಯಾದೆ ಉಳಿದಿದ್ದರೆ ಕೂಡಲೇ ಮುಖ್ಯಮಂತ್ರಿ ಉಮ್ಮನ್ ಚಾಂಡಿ ರಾಜಿನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ. ಸೋಲಾರ್, ಲಾವ್ಲಿನ್ ಕೇಸುಗಳ ವಿಷಯದಲ್ಲಿ ಯುಡಿಎಫ್ ಸರಕಾರ ಮತ್ತುಎಲ್‌ಡಿಎಫ್ ಸರಕಾರ ಸಹಮತಕ್ಕೆ ತಲುಪಿ ತನಿಖೆಯನ್ನು ಬುಡಮೇಲು ಗೊಳಿಸುವ ಸಾಧ್ಯತೆಯಿದೆ.

ಆದುದರಿಂದ ಸೋಲಾರ್ ಕೇಸ್ ತನಿಖೆಯನ್ನು ರಾಜ್ಯದ ತನಿಖಾ ಸಂಸ್ಥೆಗಳಿಗೆ ವಹಿಸದೆ ಸಿಬಿಐಗೆ ವಹಿಸಬೇಕೆಂದು ರಾಜಗೊಪಾಲ್ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳು ನಡೆದಿದೆ ಎಂಬು ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ದಿಲ್ಲಿ ಪೊಲೀಸರು ತನಿಖಿಸಬೇಕೆಂದು ಅವರು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್‌ರನ್ನು ಭೇಟಿಯಾಗಿ ಈ ವಿಷಯವನ್ನು ಚರ್ಚಿಸಲಿಕರುವುದಾಗಿ ಅವರು ಹೇಳಿದ್ದಾರೆ. ಮಾಜಿರಾಜತಾಂತ್ರಿಕ ಮತ್ತು ವಿದ್ಯಾಭ್ಯಾಸ ಬೋರ್ಡ್ ಉಪಾಧ್ಯಕ್ಷ ಟಿ.ಪಿ. ಶ್ರೀನಿವಾಸನ್‌ರನ್ನು ಎಸ್ಸೆಫ್‌ಐ ಕಾರ್ಯಕರ್ತರು ಆಕ್ರಮಿಸಿದ್ದನ್ನು ಖಂಡಿಸಿದ ಅವರು ಅದು ಕಿರಾತಕ ವರ್ತನೆಯಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News