80,000 ನಿರಾಶ್ರಿತರನ್ನು ಹೊರತಳ್ಳುತ್ತಿರುವ ಸ್ವೀಡನ್
Update: 2016-01-30 15:40 IST
ಸ್ಟಾಕ್‌ಹೋಂ: 2015ರಲ್ಲಿ ಸ್ವೀಡನ್‌ಗೆ ಬಂದ ಎಂಬತ್ತು ಸಾವಿರ ನಿರಾಶ್ರಿತರನ್ನು ಸ್ವೀಡನ್ ಸರಕಾರ ಹೊರಗಟ್ಟುತ್ತಿದೆ. ಇತ್ತೀಚೆಗೆ ಸ್ವೀಡಿಷ್ ಗೃಹಸಚಿವರು ಸುದ್ದಿಗಾರರೊಂದಿಗೆ ಈ ವಿಷಯವನ್ನು ತಿಳಿಸಿದ್ದಾರೆ. ನಿರಾಶ್ರಿತರು ಆಶ್ರಯ ನೀಡಲಿಕ್ಕಾಗಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಲಾಗಿದೆ. ಅವರನ್ನು ಕಾರ್ಗೋ ವಿಮಾನಗಳ ಮೂಲಕ ಹೊರಕ್ಕೆ ಕಳಿಸಲಾಗುವುದು ಎಂದು ಅವರು ಹೇಳಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಜನಸಂಖ್ಯೆಯೊಂದಿಗೆ ಹೋಲಿಸಿ ನೋಡುವಾಗ ಅತಿ ಹೆಚ್ಚು ನಿರಾಶ್ರಿತರಿರುವ ದೇಶ ಯುರೋಪ್‌ನಲ್ಲಿ ಸ್ವೀಡನ್ ಆಗಿದೆ. ಒಂದು ಲಕ್ಷದ ಅರುವತ್ತು ಸಾವಿರ ಮಂದಿ ಕಳೆದ ವರ್ಷ ಇಲ್ಲಿಗೆಆಶ್ರಯ ಕೇಳಿಬಂದಿದ್ದಾರೆ. ಅದೇ ವೇಳೆ ಈ ವರ್ಷ ನಲ್ವತ್ತು ಸಾವಿರ ಮಂದಿ ನಿರಾಶ್ರಿತರು ಗ್ರೀಸ್‌ಗೆ ಬಂದು ತಲುಪಿರುವ ಹಿನ್ನೆಲೆಯಲ್ಲಿ ನಿರಾಶ್ರಿತರ ಸಮಸ್ಯೆ ಪರಿಹರಿಸುವುದರಲ್ಲಿ ಬಿಕ್ಕಟ್ಟು ಎದುರಿಸುತ್ತಿರುವ ಯುರೋಪ್‌ಗೆ ಸ್ವೀಡನ್‌ನ ಈ ಕ್ರಮ ಆಶ್ಚರ್ಯ ಉಂಟುಮಾಡಿದೆ