×
Ad

ಮೊಬೈಲ್ ಮೂಲಕವೇ ಎಲ್ಲ ಸರಕಾರಿ ಸೇವೆ : ಮೋದಿ ಸರಕಾರದ ಐಡಿಯಾ !

Update: 2016-01-30 20:53 IST

 ಸರ್ಕಾರಿ ಕಚೇರಿಯಲ್ಲಿ ಅವ್ಯವಸ್ಥೆ ಇರುತ್ತದೆ ಎಂಬುದು ಎಲ್ಲರ ದೂರು ?

                 ಹಾಗಾದರೆ ಮನೆಯಲ್ಲಿ ಅಥವಾ ನೀವಿದ್ದಲ್ಲಿಗೆ ಬಂದು ನಿಮ್ಮ ಕೆಲಸ ಮಾಡಿ ಕೊಟ್ಟರೆ ಆಗಬಹುದೇ ? ಇಲ್ಲ , ಇದನ್ನು ಸಿಟ್ಟಿನಲ್ಲಿ ಅಥವಾ ತಮಾಷೆಯಲ್ಲಿ ಕೇಳುತ್ತಿಲ್ಲ .  ಕೇಂದ್ರ ಸರಕಾರದ ಯೋಜನೆಯಂತೆ ಆದರೆ ಮುಂದಿನ ಐದು ವರ್ಷಗಳಲ್ಲಿ ಎಲ್ಲ ಸರಕಾರೀ ಸೇವೆಗಳು ನಿಮ್ಮ ಮೊಬೈಲ್ ಮೋಲಕವೇ ನಿಮಗೆ ಲಭ್ಯ . ಅದಕ್ಕಾಗಿ ನೀವು ಯಾವುದೇ ಸರಕಾರೀ ಕಚೇರಿಗೆ ಹೋಗುವ ಅಗತ್ಯವೇ ಇಲ್ಲ ! 

ನ್ಯಾಸ್ಕಾಂ ಹಾಗು ಕೆಪಿಎಮ್ಜಿ ಯೊಂದಿಗೆ ಸೇರಿ ಸಿದ್ಧಪಡಿಸಿದ ವರದಿಯಲ್ಲಿ ಆಡಳಿತ ಸುಧಾರಣಾ ಹಾಗು ಸಾರ್ವಜನಿಕ ಸಮಸ್ಯೆಗಳ ಇಲಾಖೆ ಈ ಪ್ರಸ್ತಾವವನ್ನು ಕಳೆದ ವಾರ ಪ್ರಧಾನ ಮಂತ್ರಿಗೆ ಸಲ್ಲಿಸಿದೆ. 

ಇ - ಸರಕಾರ ಪಟ್ಟಿಯಲ್ಲಿ 193  ರಲ್ಲಿ 119 ನೇ ಸ್ಥಾನದಲ್ಲಿರುವ ಭಾರತ ಪಟ್ಟಿಯಲ್ಲಿ ಇನ್ನಷ್ಟು ಮೇಲೆ ಹೋಗುವ ಹಾಗು ಟಾಪ್ ಟೆನ್ ನಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿ ಈ ನಡೆ ಯಿಂದ ದೊಡ್ಡ ಸಹಾಯವಾಗಲಿದೆ ಎಂದು ಹೇಳಲಾಗಿದೆ. 

ಶುಕ್ರವಾರ ಟೆಲಿಕಾಂ ಕಾರ್ಯದರ್ಶಿಯಾಗಿ ನೇಮಕವಾದ ಈ ಹಿಂದಿನ ಎಲೆಕ್ಟ್ರಾನಿಕ್ಸ್ ಹಾಗು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಜೆ ಎಸ್ ದೀಪಕ್ ಅವರು " ಡಿಜಿಟಲ್ ಇಂಡಿಯಾದ ಉದ್ದೇಶ ಈಡೆರಬೇಕಾದರೆ ಹಾಗು ಸರಕಾರೀ ಸೇವೆಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪಬೇಕಾದರೆ ಮೊಬೈಲ್ ಅನ್ನು ಪೂರ್ಣ ಪ್ರಮಾಣದಲ್ಲಿ ಬಳಸಲೇಬೇಕು ಎಂದು ವರದಿಯಲ್ಲಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News