ಪಾಕಿಸ್ತಾನ: 230 ಶಿಕ್ಷಣ ಸಂಸ್ಥೆಗಳ ಮುಚ್ಚುಗಡೆ
Update: 2016-01-30 23:34 IST
ಇಸ್ಲಾಮಾಬಾದ್, ಜ. 30: ತಾಲಿಬಾನ್ ಬೆದರಿಕೆಯ ಹಿನ್ನೆಲೆಯಲ್ಲಿ, ಪಂಜಾಬ್ ರಾಜ್ಯದ ರಾವಲ್ಪಿಂಡಿ ವಿಭಾಗದ 230ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಅವುಗಳ ಪೈಕಿ 138 ಸರಕಾರಿ ಒಡೆತನದ ಸಂಸ್ಥೆಗಳು.
ಅದೇ ವೇಳೆ, ರವಿವಾರದ ಒಳಗೆ ಭದ್ರತೆಯನ್ನು ಹೆಚ್ಚಿಸಬೇಕು, ಇಲ್ಲವೇ ಶಿಸ್ತು ಕ್ರಮಗಳನ್ನು ಎದುರಿಸಬೇಕು ಎಂದು ಸರಕಾರ ಈ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ.