ಚಳಿಗೆ ನಡುಗುತ್ತಿರುವ ಗಲ್ಫ್ ದೇಶಗಳು; ರಾಸಲ್‌ಖೈಮದಲ್ಲಿ ಹಿಮಪಾತ
ರಿಯಾದ್: ಚಳಿಯ ತೀವ್ರತೆಗೆ ಗಲ್ಫ್ ದೇಶಗಳು ನಡುಗುತ್ತಿವೆ. ಸೌದಿ ಅರೇಬಿಯಾ, ಕುವೈತ್ ಮತ್ತಿತರ ದೇಶಗಳಲ್ಲಿ ಚಳಿ ತೀವ್ರಗೊಂಡ ಬೆನ್ನ ಹಿಂದೆಯೇ ಯುಎಇಯ ಕೆಲ ಪ್ರದೇಶಗಳಲ್ಲಿ ಉಷ್ಣಾಂಶ ಮೈನಸ್ ಡಿಗ್ರಿಗೆ ತಲುಪಿದೆ. ರಾಸಲ್‌ಖೈಮ ಜಬಲ್ ಜೈಸ್‌ನಲ್ಲಿ ಹಿಮಪಾತವಾಗಿದ್ದು, ಉಷ್ಣಾಂಶ ಮೈನಸ್ ಡಿಗ್ರಿಗೆ ಇಳಿದಿದೆ.
ಬೆಳಗ್ಗಿನ ಜಾವ 12:15ರ ಸುಮಾರಿಗೆ ದೇಶದಲ್ಲೇ ಅತ್ಯಂತ ಹೆಚ್ಚು ಚಳಿಯ ಪ್ರಮಾಣ ದಾಖಲಾಗಿದೆ. (ಮೈನಸ್ ಪಾಯಿಂಟ್ ಮೂರು ಡಿಗ್ರಿ ಸೆಲ್ಸಿಯಸ್) ಇದರಿಂದಾಗಿ ಯುಎಇ ಅತ್ಯಂತ ಹೆಚ್ಚು ಚಳಿಯೆಡೆಗೆ ಸಾಗುತ್ತಿದೆ.
ಶುಕ್ರವಾರ ಬೆಳಗ್ಗೆಯಿಂದಲೇ ಚಳಿ ಹೆಚ್ಚಿದ್ದರೂ ರಾತ್ರಿಯ ವೇಳೆ ತೀವ್ರವಾಯಿತು. ದೇಶದಲ್ಲಿ ಚಳಿ ತೀವ್ರವಾಗಲಿದೆ ಎಂದು ಕಳೆದ ವಾರ ಹವಾಮಾನ ತಜ್ಞರು ಹೇಳಿದ್ದರು. ಈ ವಾರ ಉಷ್ಣಾಂಶ ನಾಲ್ಕು ಡಿಗ್ರಿವರೆಗೆ ಇಳಿಯಲು ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಕುವೈತ್‌ನ ಅಬ್‌ದಲಿಯಲ್ಲಿ ಕಳೆದ ದಿನ ಮೈನಸ್ ಡಿಗ್ರಿ ಚಳಿ ದಾಖಲಾಗಿತ್ತು. ಕುವೈತ್, ಸೌದಿಯ ರಿಯಾದ್‌ಗಳಲ್ಲಿ ದಾಖಲಾದ ಕಡಿಮೆ ಉಷ್ಣಾಂಶ ಎರಡು ಡಿಗ್ರಿ ಸೆಲ್ಸಿಯಸ್. ದಮಾಮ್, ಮದೀನಾಗಳಲ್ಲಿ ಐದು, ದೋಹ, ಬಹ್ರೈನ್‌ಗಳಲ್ಲಿ 11 ಡಿಗ್ರಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಹದಿನಾಲ್ಕು ಅಡಿವರೆಗೆ ಸಮುದ್ರದ ಅಲೆಗಳು ಎದ್ದೇಳುವ ಸಾಧ್ಯತೆಯಿರುವುದರಿಂದ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಚಳಿಗೆ ನಡುಗುತ್ತಿರುವ ಗಲ್ಫ್ ದೇಶಗಳುಚಳಿಗೆ ನಡುಗುತ್ತಿರುವ ಗಲ್ಫ್ ದೇಶಗಳುವರದಿ :http://www.varthabharati.in/article/antaraashtriya/4758#
Posted by Vartha Bharati on Saturday, 30 January 2016