ಬಾಂಗ್ಲಾದೇಶದ: ಯುವಕನೊಬ್ಬನ ಕೈಕಾಲೆರಡರಲ್ಲಿ ಬೇರುಗಳ ಸ್ಥಿತಿಯಲ್ಲಿ ಬೆರಳುಗಳು.
ಬಾಂಗ್ಲಾದೇಶ: ಕೈಯಲ್ಲಿ ಆರನೆ ಬೆರಳಿದ್ದರೆ ಅದು ಕೊಡುವ ತೊಂದರೆ ಅಷ್ಟಿಷ್ಟಲ್ಲ. ಆದರೆ ಬಾಂಗ್ಲಾದೇಶದ ಯುವಕನೊಬ್ಬನ ಕೈಕಾಲೆರಡರಲ್ಲಿ ಬೇರುಗಳ ಸ್ಥಿತಿಯಲ್ಲಿ ಬೆರಳುಗಳು ಹುಟ್ಟಿಕೊಂಡಿವೆ. ಬಹಳ ಅಪರೂಪದ ರೋಗವಾಗಿದ್ದು ವಿಶ್ವವನ್ನೇ ದಿಗ್ಭ್ರಮೆಗೀಡಾಗಿಸಿದೆ ಎನ್ನಬಹುದು. ಕುಲ್ನಾ ನಿವಾಸಿಯಾದ ಈತನಿಗೆ ಕೇವಲ 25ವರ್ಷ ವಯಸ್ಸು. ಮರಗಳಿಗೆ ಬೇರುಗಳು ಟಿಸಿಲೊಡೆಯುವಂತೆ ಇವನ ಬೆರಳುಗಳು ಬೆಳೆಯುತ್ತಲೇ ಇವೆ. ಈ ಸಂಕಷ್ಟದ ಸ್ಥಿತಿಯಿಂದಾಗಿ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಎಪಿಡೊರ್‌ಮೊಡಿಸ್ ಪ್ಲೈಸಿಸ್ ವೆರುಸಿಫೋರ್ಮಿಸ್ ಎಂಬ ಅಪೂರ್ವ ರೋಗ ಬಜಂದರ್ ಎಂಬವನನ್ನು ಕಾಡುತ್ತಿದೆ.
ಈತನನ ಚಿಕಿತ್ಸೆಗಾಗಿ ತಜ್ಞರ ಒಂದು ಸಮಿತಿ ರೂಪಿಸಿ ಡಾಕಾಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್(ಡಿಎಂಸಿಎಚ್) ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ. ಡಿಎಂಸಿಎಚ್‌ನ ಬೋನ್ ಆಂಡ್ ಪ್ಲಾಸ್ಟಿಕ್ ಸರ್ಜರಿಯ ಚೀಫ್ ಕೋ ಆಡಿನೇಟರ್ ಆದ ಡಾ. ಸಾಮಂತ್ ಲಾಲ್ ಸೇನ್ ಇದಕ್ಕೆ ಸಂಬಂಧಿಸಿ ವಿಷಯವನ್ನು ಹೊರಗೆಡಹಿದ್ದಾರೆ. ಅವರ ಪ್ರಕಾರ ನಿನ್ನೆ ಬೋನ್ ಯುನಿಟ್‌ನಲ್ಲಿ ಬಜಂದ್‌ರನ್ನು ದಾಖಲಿಸಿಕೊಳ್ಳಲಾಗಿದೆ. ಈ ರೋಗಗಕ್ಕಾಗಿ ರಿಕ್ಷಾಕಾರನಾದ ಬಜಂದರ್‌ನನ್ನು ಇದಕ್ಕೆ ಮೊದಲು ಕುಲ್ನಾದ ಗಝ್ಝಿ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‌ನಲ್ಲಿ ದಾಖಲಿಸಲಾಗಿತ್ತು. ಇದೆ ರೋಗವಿದ್ದ ಇಂಡೋನೇಷಿಯದ ಡೊಡೆ ಕೊಸ್ವಾರ ನಿನ್ನೆ ತೀರಿಹೋಗಿರುವುದು ಕೂಡ ಕಾಕತಾಳೀಯವಾಗಿದೆ. ಆದರೆ ಆತ ಈ ರೋಗದಿಂದ ಮೃತನಾಗಿದ್ದಲ್ಲ ಎಂದೂ ವರದಿಯಾಗಿದೆ. ಡೀಮನ್ ಎಂದು ಕರೆಯಲಾಗಿದ್ದ ಕೊಸ್ವಾರನ ಕಥೆಯನ್ನು 2008ರಲ್ಲಿ ಡಿಸ್ಕವರಿ ಚ್ಯಾನೆಲ್ ಪ್ರಸಾರ ಮಾಡಿತ್ತು. ತನ್ನ ಶರೀರದಿಂದ ಸರ್ಜರಿಯಲ್ಲಿತೆಗೆದು ಹಾಕಲಾದ ಆರು ಕಿಲೋದಷ್ಟಿದ್ದ ಬೆಳೆದಬೆರಳು ಅಥವಾ ಬೇರುಗಳನ್ನು ತೆಗೆದು ಹಾಕಿದ ನಂತರ ಮನೆಗೆ ಮರಳುತ್ತಿದ್ದ ಕೊಸ್ವಾರನನ್ನು ಚ್ಯಾನೆಲ್ ತೋರಿಸಿತ್ತು. ಹ್ಯೂಮನ್ ಪಾಪ್ಪಿಲೊಮ ವೈರಸ್(ಎಚ್‌ಪಿವಿ) ಈ ರೋಗಕ್ಕೆ ಕಾರಣವೆನ್ನಲಾಗಿದೆ. ಬೇರುಗಳಂತೆ ಕೈಕಾಲುಗಳಲ್ಲಿ ಬೆಳೆಯಲು ಈ ವೈರಸ್ ಕಾರಣವೆಂದು ಓರ್ವ ಅಮೆರಿಕನ್ ವೈದ್ಯರು ಮೊದಲು ಹೇಳಿಕೊಂಡಿದ್ದರು. ಕೊಸ್ವಾರನಿಗೆ ತಗಲಿದ ಇನ್‌ಫೆಕ್ಷ್‌ನ ಜಗತ್ತಿನಲ್ಲಿ ಅತಿಮಾರಕವಾದುದು ಎಂದು ವೈದ್ಯರು ಭಾವಿಸಿದ್ದಾರೆ. ಕೊಸ್ವಾರನ ಕಾಲಿಗೆಬಾಲ್ಯದಲ್ಲಿ ಒಂದು ಸರ್ಜರಿ ನಡೆಸಿದ ಬಳಿಕ ಅವನ ಶರೀರದಲ್ಲಿ ಅಂತಹ ಬೆಳವಣಿಗೆಗಳು ಕಂಡು ಬಂದಿದ್ದವು. ಇದೆ ಕಾರಣದಿಂದ ಆತ ಕೆಲಸಕ್ಕೆ ರಾಜಿನಾಮೆ ಕೊಡಬೇಕಾಗಿತ್ತು. ಮತ್ತು ವರ್ಷದಲ್ಲಿ ಅವನಿಗೆ ಎರಡು ಬಾರಿ ಸರ್ಜರಿ ನಡೆಸಲಾಗುತ್ತಿತ್ತು.