×
Ad

ಬ್ರಿಟನ್‌ನಲ್ಲಿ ಮುಸ್ಲಿಮ್ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳ!

Update: 2016-01-31 14:50 IST

ಜನಸಂಖ್ಯೆಯ ಬಹುಭಾಗ ಕ್ರೈಸ್ತರಿರುವ ಬ್ರಿಟನ್‌ನ್ನು ಇಸ್ಲಾಮೀಕರಿಸುತ್ತೇವೆಂದು ಐಸಿಸ್ ಬೆದರಿಕೆ ಹಾಕುವುದಿದೆ. ಅದಕ್ಕಾಗಿ ಅವಿಶ್ವಾಸಿಗಳನ್ನು ಕೊಲ್ಲಲಿಕ್ಕೂ ಬೆದರಿಸಿ ಮತಾಂತರಗೊಳಿಸುವುದಕ್ಕೂ ನಾವು ಹಿಂಜರಿಯುವುದಿಲ್ಲ ಎಂದು ಅದು ಹೇಳುವುದಿದೆ. ಆದರೆ ಇದು ಯಾವುದೂ ಅಲ್ಲ ಸಹಜ ರೀತಿಯಲ್ಲಿ ಬ್ರಿಟ್‌ನ ಮುಸ್ಲಿವರ ಸಂಖ್ಯೆ ಹೆಚ್ಚುತ್ತಲಿವೆ ಎಂದು ಹೊಸ ವರದಿಯೊಂದು ತಿಳಿಸಿದೆ.

ಕಳೆದ ಹದಿನೈದು ವರ್ಷಗಳಿಂದ ಇಲ್ಲಿ ಮುಸ್ಲಿಮರ ಜನಸಂಖ್ಯೆ ದುಪ್ಪಟ್ಟುಗೊಂಡಿದೆ. ಅಲ್ಲದೆ ಬಿಳಿಯರ ಜನಸಂಖ್ಯೆಯಲ್ಲಿ ಭಾರೀ ಕುಸಿತ ಆಗಿದೆ. ಇಂಗ್ಲೆಂಡ್‌ನಲ್ಲಿ ಈಗ ದಶಲಕ್ಷ ಮುಸ್ಲಿಮರಿದ್ದಾರೆ. ಇಷ್ಟರವರೆಗೆ ಮುಸ್ಲಿಂ ಜನಸಂಖ್ಯೆ ಇಷ್ಟು ಇರಲಿಲ್ಲ. ವಿವಿಧ ದೇಶಗಳಿಂದ ಇಲ್ಲಿಗೆ ವಲಸೆ ಬಂದ ಮುಸ್ಲಿಮರಿಂದಾಗಿ ಈ ಹೆಚ್ಚಳ ಸಂಭವಿಸಿದೆ ಎನ್ನಲಾಗಿದೆ. ಲಂಡನ್‌ನ ಕೆಲ ಪ್ರದೇಶಗಳಲ್ಲಿ ಮುಸ್ಲಿಮರು ಅರ್ಧಭಾಗದಷ್ಟಿದ್ದಾರೆ ಎಂದು ಆಫೀಸ್ ಫಾರ್ ನೇಶನಲ್ ಸ್ಟಾಟಿಟಿಕ್ಸ್ ಹೊಸ ಅಧ್ಯಯನದ ಮೂಲಕ ತಿಳಿಸಿದೆ. ಮುಂದಿನ ಹತ್ತು ವರ್ಷಗಳಲ್ಲಿ ಇಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗುವರು. ಇಂಗ್ಲೆಂಡ್ ಮತ್ತು ವೇಲ್ಸ್‌ನ ಮುಸ್ಲಿಮರಲ್ಲಿ ಅರ್ಧಾಂಶ ಮಂದಿ ವಿದೇಶಗಳಲ್ಲಿ ಜನಿಸಿದವರಾಗಿದ್ದಾರೆ.

ಇವರಲ್ಲಿ ಹೆಚ್ಚಿನವರು ಹತ್ತುವರ್ಷಕ್ಕಿಂತ ಕೆಳ ಪ್ರಾಯದವರಾಗಿದ್ದಾರೆ. ಮೂರು ದಶಲಕ್ಷ ಮುಸ್ಲಿಮರು ಬ್ರಿಟನ್‌ನಲ್ಲಿದ್ದಾರೆ ಅಂದರೆ ದೇಶದ ಇಪ್ಪತ್ತು ಮಂದಿಯಲ್ಲಿ ಒಬ್ಬ ಮುಸ್ಲಿಮ್ ಎಂದಾಗಿದೆ. ಮುಸ್ಲಿಮರನ್ನು ಬ್ರಿಟಿಷ್ ಸಮಾಜದೊಂದಿಗೆ ಬೆರೆಸುವುದು ಮತ್ತು ಭಯೋತ್ಪಾದನೆಯನ್ನು ವಿರೋಧಿಸಲು ನೀತಿರೂಪಿಸಲಿಕ್ಕಾಗಿ ತ್ವರಿತ ಪ್ರಯತ್ನಗಳು ನಡೆಯುತ್ತಿರುವುದರ ನಡುವೆ ಹೊಸ ಲೆಕ್ಕಗಳು ಹೊರಬಂದಿವೆ.ಭಯೋತ್ಪಾದನೆಯ ವಿರುದ್ಧ ಹೋರಾಟ ತೀವ್ರಗೊಳಿಸಲಿಕ್ಕಾಗಿ ಮುಸ್ಲಿಂ ಮಹಿಳೆಯರೊಂದಿಗೆ ಇಂಗ್ಲಿಷ್ ಕಲಿಯಬೇಕೆಂದು ಇತ್ತೀಚೆಗೆ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಆಗ್ರಹಿಸಿದ್ದರು.

1991 ಬ್ರಿಟನ್‌ನಲ್ಲಿ ಮುಸ್ಲಿಮರ ಸಂಖ್ಯೆ ಕೇವಲ950.000 ಇದ್ದರೆ ಒಂದು ದಶಕಗಳ ನಂತರ 1,546.626 ಆಗಿತ್ತು. ಇದರೊಂದಿಗೆ ಒಟ್ಟು ಜನಸಂಖ್ಯೆಯಲ್ಲಿ ಶೇ.ಮೂರರಷ್ಟು ಮುಸ್ಲಿಮರಾದಂತಾಗಿದೆ. 2011ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮುಸ್ಲಿಮರು 2,706,066 ಆಗಿ ಏರಿಕೆಯಾಗಿದೆ. 2014ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮುಸ್ಲಿಮರ ಸಂಖ್ಯೆ3,046,607 ಆಗಿದೆ. ಜನಸಂಖ್ಯೆಯ 5.4ರಷ್ಟು ಈಗ ಮುಸ್ಲಿಮರಾಗಿದ್ದಾರೆ. ಗ್ರೇಟ್ ಬ್ರಿಟನ್‌ನಲ್ಲಿ ಒಟ್ಟು ಹೆಚ್ಚಳ 3,114,992 ಆಗಿದೆ. ಇವರಲ್ಲಿ ಅರ್ಧಾಂಶ ಜನರು ಅಂದರೆ1,554,022 ಮಂದಿ ವಿದೇಶಗಳಲ್ಲಿ ಹುಟ್ಟಿದವರು. ಇವರಲ್ಲಿ ಬಹುಭಾಗ ಅಥವಾ 1,484,060 ಮಂದಿ ಯುರೋಪಿಯನ್ ಯೂನಿಯನ್‌ನಿಂದ ಹೊರಗಿನವರು ಇಲ್ಲಿಗೆ ಬಂದವರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News